ಬಣ, ಗುಂಪುಗಾರಿಕೆ ಬಿಡಿ’ : ರಣದೀಪ್ ಸಿಂಗ್ ಸುರ್ಜೇವಾಲ್

ಬೀದರ್ : ನಗರದ ಬೆಲ್ದಾಳೆ ಫಂಕ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು‘ರೈತ, ಬಡವರ ವಿರೋಧಿಗಳು ದೇಶ ಆಳುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಬದ್ಧವಾಗಿ ಕೆಲಸ ಮಾಡಬೇಕಿದೆ. ಯಾರಿಗೇ ಟಿಕೆಟ್ ಸಿಕ್ಕರೂ ಬಣ, ಗುಂಪುಗಾರಿಕೆ ಬಿಟ್ಟು ಒಗ್ಗೂಡುವ ಅಗತ್ಯವಿದೆ’ ಎಂದು ರಣದೀಪ್ ಸಿಂಗ್ ಸುರ್ಜೇವಾಲ್ ಮನವಿ ಮಾಡಿದರು.

‘ಬೀದರ್ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಜನರು ಮತ್ತೆ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ಪಕ್ಷದ ಗೆಲುವಿಗೆ ನಾವು ಒಗ್ಗೂಡಿ ಶ್ರಮಿಸಬೇಕಿದೆ. ಪಕ್ಷ ಜನಪರ ಆಡಳಿತ ನೀಡಲು ಬದ್ಧವಾಗಿದ್ದು, ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚು ಕೆಲಸ ಮಾಡಲಿದೆ’ ಎಂದು ಹೇಳಿದರು

ನಮಗೆ ಪಕ್ಷ ತಾಯಿ ಇದ್ದ ಹಾಗೆ !
ನಮ್ಮ ಪಕ್ಷ ಯಾರಿಗೂ ಮೋಸ ಮಾಡಲ್ಲ ,ನಮ್ಮ ಪಕ್ಷ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ,ಮತ್ತು ಎಲ್ಲರೂ ಅವಕಾಶ ನೀಡುತ್ತದೆ ಅದಕ್ಕಾಗಿ ಯಾರು ಪಕ್ಷದ ಮೇಲೆ ಮುನಿಸಿಕೊಳ್ಳಬಾರದು ಎಂದರು

Latest Indian news

Popular Stories