ಬಿಜೆಪಿ ಯವರಿಂದ ದೇಶದಲ್ಲಿ ರಾಜ್ಯದ ವರ್ಚಸ್ಸು ಕಡಿಮೆಯಾಗುತ್ತಿದೆ : ಈಶ್ವರ್ ಖಂಡ್ರೆ

ಬೀದರ್ ಸುದ್ದಿ

ನಗರದ ಬೆಲ್ದಾಳೆ ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿದ್ದು,ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಯವರು ಮಾತನಾಡಿದ್ದು ಕರ್ನಾಟಕದಲ್ಲಿ ಈ ವರ್ಷ ಚುನಾವಣೆ ನಡೆಯಲಿದ್ದು,ನಮ್ಮ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬ ಹಾಗಿದೆ,ಇಡೀ ದೇಶ ನಮ್ಮ ಕಡೆ ನೋಡುತ್ತಿದ್ದೆ,ಯಾಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ,ಸದ್ಯ ನಮ್ಮಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದು ,ನಮ್ಮ ರಾಜ್ಯದ ವರ್ಚಸ್ಸು ಕಡಿಮೆಯಾಗುತ್ತಿದೆ,
ಕಲ್ಯಾಣ ಕರ್ನಾಟಕದ ಭಾಗದಲ್ಲಿ 7 ಜಿಲ್ಲೆಗಳಿವೆ,ಆದರೆ ಯಾವ ಜಿಲ್ಲಿಯು ಸಹ ಇವರ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಹೊಂದಿಲ್ಲ,ಇಂತಹ ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ತಾವೆಲ್ಲರೂ ಶ್ರಮಿಸಬೇಕು ಎಂದರು,

10 ಕೆಜಿ ಅಕ್ಕಿಯ ಭರವಸೆ

ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಬಿಪಿಲ್ ಕಾರ್ಡ ದಾರರಿಗೆ 5 ಕೆ ಜಿ ಯ ಬದಲು 10 ನೀಡಲಾಗುವುದು ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ರಣದೀಪ್ ಸಿಂಗ ಸರ್ಜೇವಲ್ ,ಶ್ರೀಧರ ಬಾಬು,ರಹೀಮ್ ಖಾನ್,ಅಶೋಕ್ಖೇಣಿ,ವಿಜಯಸಿಂಗ್,ಚಂದ್ರಶೇಖರ್ ಪಾಟೀಲ್,ಮೀನಾಕ್ಷಿ ಸಂಗ್ರಾಮ, ಗೀತ ಚಿದ್ರೇ,ಸೇರಿದಂತೆ ಅನೇಕರು ಉಸ್ಥಿತರಿದ್ದರು

Latest Indian news

Popular Stories