ಬೀದರ್ ನಗರದಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿಯಿಲ್ಲ, ಬೀದರ್ ಉತ್ಸವ ಏಕೆ?

ಬೀದರ್ ಉತ್ಸವ ರದ್ದುಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಜನವರಿ ೭ ರಿಂದ ೯ ರವರೆಗೆ ನಡೆಯಲಿರುವ ಬೀದರ್ ಉತ್ಸವವನ್ನು ರದ್ದುಪಡಿಸಬೇಕೆಂದು ಸಂಘಟನೆಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತರಿಗೆ ಅರ್ಜಿ ಸಲ್ಲಿಸಿದರು.

ಬೀದರ್ ನಗರದಲ್ಲಿ ಚರಂಡಿ, ರಸ್ತೆ ಮತ್ತು ದಾರಿದೀಪಗಳಿಲ್ಲ ಅದು ಬಿಟ್ಟು ಉತ್ಸವ ಮಾಡುವುದು ಎಷ್ಟು ಸರಿ ಎಂದು ಭಾಲ್ಕಿ ಘಟಕದ ಅಧ್ಯಕ್ಷರಾದಂತಹ ಗಣೇಶ್ ಪಾಟೀಲ್ ಪ್ರಶ್ನಿಸಿದ್ದಾರೆ. ಬೀದರ್ ಉತ್ಸವಕ್ಕೆ ಸಂಗ್ರಹಿಸಿರುವ ಹಣವನ್ನು ರಸ್ತೆ ದುರಸ್ತಿಪಡಿಸಲಿ ಎಂದು ಅವರು ಆಗ್ರಹಿಸಿದರು.

Latest Indian news

Popular Stories