ಬೀದರ್: ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ಸುನಂದಾ(48), ಐಶ್ವರ್ಯ(16), ಸುಮೀತ್(10) ಶವಗಳು ಪತ್ತೆಯಾಗಿವೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಸಂಗಪ್ಪಾ ಲದ್ದೆ ಕುಟುಂಬದ ಮೂವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಸಂಗಪ್ಪ ಲದ್ದೆ ಅವರ ಹೆಂಡತಿ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ನಾಲ್ವರು ಒಟ್ಟಿಗೆ ಹೋಗುವಾಗ ಹಳ್ಳದ ನೀರು ಏಕಾಏಕಿ ಹೆಚ್ಚಾಗಿದೆ. ಈ ವೇಳೆ ಮೂವರು ಕೊಚ್ಚಿಕೊಂಡು ಹೋಗಿದ್ದು ಸಂಗಪ್ಪ ಲದ್ದೆ ಬಚಾವ್ ಆಗಿದ್ದರು.