ಔರಾದ್ ತಾಲ್ಲೂಕಿನ ಕಂದಗೂಳ್ ಸೇತುವೆ ಬಳಿಯ ಮಾಂಜ್ರಾ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಹಿನ್ನೆಲೆ ಶವ ಹೊರಗೆ ತೆಗೆದಿದ್ದು, ಗುರುತು ಪತ್ತೆಯಾಗಿದೆ.
ತಾಲೂಕಿನ ಜೋಜನಾ ಗ್ರಾಮದ ಮೋಹನ್ ಶರಣಪ್ಪ (4೦) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಅಪರಿಚಿತ ವಶ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಸಂತಪೂರ್ ಠಾಣೆಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಪೊಲೀಸರು ಭೇಟಿ ನೀಡಿ ಶವ ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.