Bidar: ವಿಪರೀತ ತಲೆನೋವಿನಿಂದ ನೊಂದ ಗರ್ಭಿಣಿ: ಬಾವಿಗೆ ಹಾರಿ ಆತ್ಮಹತ್ಯೆ

ತೀವ್ರವಾದ ತಲೆನೋವಿನಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಕಿರ್ತಿ ರಾಮು (22) ಎಂದು ಗುರುತಿಸಲಾಗಿದೆ. ಈಕೆ ಸದ್ಯ 7 ತಿಂಗಳ ಗರ್ಭಿಣಿ. ಈ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರದಲ್ಲಿ ನಡೆದಿದೆ.

ಕೀರ್ತಿರಾಮು ಅವರು ಹಲವು ತಿಂಗಳುಗಳಿಂದ ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಮಾಡಿದರೂ ಗುಣವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಕೀರ್ತಿರಾಮು ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಗೆ ಬಿದ್ದ ಗರ್ಭಿಣಿಯ ಮೃತದೇಹವನ್ನು ಪೊಲೀಸರು ಮೇಲೆಕ್ಕಿತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories