ಬೀದರ್; ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟು | ಕಣ್ಣು ಕಳೆದುಕೊಂಡ ಮಹಿಳೆ

ಬೀದರ್: ಬೀದರ್(Bidar)ನ ಗುಂಪ್ಪಾದಲ್ಲಿರುವ ವಿಜಯ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡ ಘಟನೆ ನಡೆದಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ವಂದನಾ, ಕಣ್ಣು ಕಳೆದುಕೊಂಡ ಮಹಿಳೆ. ಇವರು ಟೆಸ್ಟ್ ಟ್ಯೂಬ್ ಬೇಬಿಗಾಗಿ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹೈಡೋಸ್ ಇಂಜೆಕ್ಷನ್ ಕೊಟ್ಟಿರುವ ಪರಿಣಾಮವಾಗಿ ಮಹಿಳೆ ಕಣ್ಣು ಕಳೆದುಕೊಂಡ ಆರೋಪ ಕೇಳಿಬಂದಿದೆ.

ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟ ಮಹಿಳೆ
ಇನ್ನು ಘಟನೆ ಕುರಿತು ಮಹಿಳೆ ವಂದನಾ ಅವರು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ, ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಟೆಸ್ಟ್ ಟ್ಯೂಬ್ ಬೇಬಿ ಆಗಿಲ್ಲ. ಈ ಮಧ್ಯೆ ಹೈಡೋಸ್ ಇಂಜೆಕ್ಷನ್ ಮಾತ್ರೆಗಳಿಂದ ಮಹಿಳೆ ಕಣ್ಣು ಕಳೆದುಕೊಂಡಿದ್ದಾರೆ. ಈ ಹಿನ್ನಲೆ ವಂದನಾ, ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Latest Indian news

Popular Stories