ಬೀದರ್: ಬಿಸಿಲಿಗೆ ಬತ್ತಿದ ಕೆರೆಗಳು; ದಿನನಿತ್ಯ ಪ್ರಾಣಿ-ಪಕ್ಷಿಗಳಿಗೆ ನೀರಿಟ್ಟು ದಾಹ ನೀಗಿಸುತ್ತಿರೋ ಯುವಕರು

ಬಿಸಿಲಿಗೆ ಬೀದರ್ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯನ ಪ್ರಕರತೆ ಹೆಚ್ಚಾಗುತ್ತಿದ್ದು, ಪ್ರಾಣಿ- ಪಕ್ಷಿಗಳು, ಜನ-ಜಾನುವಾರುಗಳು ಬಿಸಿಲಿನ ತಾಪಕ್ಕೆ ನಲುಗುವಂತಾಗಿದೆ. ಕೆಲವು ಯುವಕರು ಪಕ್ಷಿಗಳಿಗೆ ನೀರು ಹಾಕಿ ಹಕ್ಕಿಗಳ ದಾಹ ಇಂಗಿಸಿದರೆ, ಜನರು ತಂಪು ಪಾನೀಯಗಳನ್ನ ಸೇವಿಸಿ ದಾಹ ಇಂಗಿಸಿಕೊಳ್ಳುತ್ತಿದ್ದಾರೆ.

ಎರಡು ರಾಜ್ಯದ ಗಡಿಯನ್ನ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ಈ ಬಿಸಿ, ನಗರದಲ್ಲಿನ ಪ್ರಾಣಿ ಪಕ್ಷಿಗಳಿಗೂ ತಟ್ಟುತ್ತಿದೆ. ಇದನ್ನು ಮನಗಂಡ ಬೀದರ್ ಪಟ್ಟಣದ ಸ್ವಾಭಿಮಾನಿ ಗೆಳೆಯರ ಬಳಗದ ಯುವಕರು, ಅರಣ್ಯ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸಿಮೆಂಟ್ ತೊಟ್ಟಿಯನ್ನ ನಿರ್ಮಾಣ ಮಾಡಿ ಪಕ್ಷಿಗಳಿಗೆ ನೀರು ಹಾಕುತ್ತಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಯುವಕರು ಅರಣ್ಯದಲ್ಲಿ ತೊಟ್ಟಿಯನ್ನ ನಿರ್ಮಾಣ ಮಾಡಿ ಅಲ್ಲಿಗೆ ಪ್ರತಿದಿನವೂ ನೀರು ತಂದು ಇಲ್ಲಿಗೆ ಹಾಕುತ್ತಿದ್ದಾರೆ. ಇದು ಕಾಡು ಪ್ರಾಣಿಗಳಿಗೆ ದಾಹ ಇಂಗಿಸಿಕೊಳ್ಳಲು ಅನುಕೂಲವಾಗಿದ್ದು ಗುಬ್ಬಿ, ಅಳಿಲು, ನವಿಲು, ಕಾಗೆ ಹೀಗೆ ನಾನಾ ರೀತಿಯ ಪಕ್ಷಿಗಳು ಇಲ್ಲಿನ ಪ್ರದೇಶದಲ್ಲಿ ಬಂದು ನೀರು ಕುಡಿದು ಆಹಾರ ಸೇವಿಸಿ ಹೋಗುತ್ತಿವೆಂದು ಸ್ವಾಭಿಮಾನಿ ಗೆಳೆಯರ ಬಳಗದವರು ಹೇಳುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಬಿಸಿಲು ವಿಫರಿತವಾಗಿ ಹೆಚ್ಚಾಗುತ್ತಿದೆ. ಪ್ರತಿದಿನವೂ ಸರಾಸರಿ 36 ಡಿಗ್ರಿ ಆಸುಪಾಸಿನಲ್ಲಿ ಬಿಸಲು ದಾಖಲಾಗುತ್ತಿದೆ. ಇದರಿಂದಾಗಿ ಜನರು ಹೊರಗಡೆಗೆ ಓಡಾದಂತಹ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆ ಬಿಸಿಲಿನಿಂದ ದೇಹವನ್ನ ತಂಪು ಮಾಡಿಕೊಳ್ಳಲು ಜನರು ತಂಪು ಪಾನೀಯದ ಮೋರೆ ಹೋಗಿದ್ದರೆ, ದ್ವಿ-ಚಕ್ರ ವಾಹನದ ಚಾಲಕರಂತೂ ಮುಖಕ್ಕೆ ಕೆಂಡ ಎರಚಿದ ಅನುಭವಕ್ಕೆ ಒಳಗಾಗುತ್ತಿದ್ದಾರೆ. ಇದರ ನಡುವೆ ಜಿಲ್ಲೆಯಲ್ಲಿ ಕಾಡಿನಲ್ಲಿ ಬದುಕುವ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರು ಸಿಗದಂತಾ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನ ಹಾಕುವ ಮೂಲಕ ಪ್ರಾಣಿ ಪಕ್ಷಿಗಳ ಪ್ರೇಮವನ್ನ ಮೇರೆಯುತ್ತಿದ್ದಾರೆ.

ಇವರು ಪ್ರಾಣಿ-ಪಕ್ಷಿಗಳು ಹೆಚ್ಚಿಗೆ ಇರುವ ಸ್ಥಳಗಳಾದ ಚಿಟ್ಟಾ ಅರಣ್ಯ ಪ್ರದೇಶ, ದೇವ ಅರಣ್ಯ ಪ್ರದೇಶ, ಜಿಂಕೆಗಳು ಅತಿ ಹೆಚ್ಚಾಗಿ ಕಂಡು ಬರುವ ಬೆಳ್ಳೂರಾ ಅರಣ್ಯ ಹಾಗೂ ಬೀದರ್ ಜಿಲ್ಲೆಯ ಚಿಟಗುಪ್ಪಾ ಅರಣ್ಯ ಪ್ರದೇಶದಲ್ಲಿ ಹತ್ತಾರು ಸಿಮೆಂಟ್ ತೊಟ್ಟಿಯನ್ನ ನಿರ್ಮಿಸಿ, ಅಲ್ಲಿ ನೀರು ತಂದು ಹಾಕುತ್ತಿದ್ದಾರೆ. ಇನ್ನು ಈ ಯುವಕರು ಹಾಕಿದ ನೀರನ್ನ ವನ್ಯಜೀವಿಗಳು ನೀರು ಕುಡಿಯುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವಕರನ್ನ ಮತ್ತಷ್ಟು ಪ್ರೇರೆಪಣೆ ಮಾಡಿದೆ ಎಂದು ಇವರು ಹೇಳುತ್ತಿದ್ದಾರೆ. ಪ್ರಾಣಿ ಪಕ್ಷಗಳು ಕೂಡ ಬಿಸಿಲಿನ ಹೊಡೆತಕ್ಕೆ ನಲುಗಿ ಹೋಗಿದ್ದು, ನೀರು ಸಿಗದಂತಾ ವಾತಾವರಣ ನಿರ್ಮಾಣವಾಗಿದೆ. ಆದರೆ, ಕೆಲವು ಗ್ರಾಮದ ಯುವಕರು ಪಕ್ಷಿಗಳಿಗೆ ನೀರು-ಆಹಾರ ಕೊಟ್ಟು ಅವುಗಳಿಗೆ ಆಸರೆಯಾಗುವ ಕೆಲಸ ಮಾಡುತ್ತಿದ್ದಾರೆ.

Latest Indian news

Popular Stories