ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಬಹಳಷ್ಟು ಸಹಕಾರಿಯಾಗುತ್ತವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಿದ್ದರಾಮೇಶ್ವ ಆಯುರ್ವೇದ ಆಸ್ಪತ್ರೆಯ ಡಾ ಗಣಪತಿರಾ ರಾವ್ ವೈದ್ಯರಾದ ಅವರು ಹೇಳಿದರು.
ಬೀದರ್ ತಾಲ್ಲೂಕಿನ ಆಣದೂರು ಗ್ರಾಮದ ಭವಾನಿ ಮಂದಿರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಭಿಯಾನದ ಪ್ರಯುಕ್ತ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಈ ತರಹದ ಆರೋಗ್ಯ ತಪಾಸಣಾ ಶಿಬಿರಗಳು ಜರುಗುತ್ತಿರಬೇಕು ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಈ ಹಿಂದಿನ ದಿನಗಳಲ್ಲಿ ವಾಂತಿ -ಬೇದಿ, ಟೈಫಾಯಿಡ್, ಕ್ಷಯ, ಕಾಲರಾದಂತಹ ರೋಗಗಳು ಸಾಮಾನ್ಯವಾಗಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಿಗೆ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳಂತ ರೋಗಗಳು ಸಾಮಾನ್ಯವಾಗಿ ಕಾಣಿಸುತ್ತಿವೆ ಈ ತರಹದ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು, ಕೆಲಸದ ಒತ್ತಡದಲ್ಲಿ ಸರಿಯಾದ ಆಹಾರ ಸೇವಿಸದೆನೆ ಮತ್ತು ತನ್ನ ಶರೀರಕ್ಕು ಸಮಯ ಮೀಸಲಿಡದೆನೆ ದುಡಿದರೆ ರೋಗಗಳು ಬಂದು ಸೇರಿಕೊಳ್ಳುತ್ತವೆ, ಅದಕ್ಕಾಗಿ ಪ್ರತಿದಿನ ಸ್ವಚ್ಚತೆಯಿಂದಿರುವುದರ ಜೊತೆಗೆ ನಿಯಮಿತವಾಗಿ ಯೋಗ, ಧ್ಯಾನ, ಆಟ, ಸಾತ್ವಿಕ ಆಹಾರ ಸೇವನೆ, ಸರಿಯಾದ ನಿದ್ರೆ ಇದೆಲ್ಲದರ ಜೊತೆಗೆ ಅನಾವಶ್ಯಕವಾಗಿ ಒತ್ತಡಕ್ಕೊಳಗಾಗದೆನೆ ನೆಮ್ಮದಿಯಿಂದ ಬದುಕಿದಾಗ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಿದರು.
ಹೇಮಂತ್ ಎಬಿವಿಪಿ ನಗರ ಸಂಘಟನೆ ಕಾರ್ಯದರ್ಶಿ ಮಾತನಾಡಿ ಸೇವಾ ಅಭಿಯಾನದ ಪ್ರಯುಕ್ತ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು ವಿಶೇಷವಾಗಿ ಯುವಕರನ್ನು ಕೇಂದ್ರಿಕರಿಸಿಕೊAಡು ಆರೋಗ್ಯ ತಪಾಸಣಾ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತಿದೆ ಬಿಪಿ, ಶುಗರ್, ರಕ್ತದ ಗುಂಪು, ಹೆಮುಗ್ಲೋಬಿನ್ ಪರಿಕ್ಷಿಸಿ ಸಣ್ಣ ಪುಟ್ಟ ಕಾಯಿಲೆಗಳಿದ್ದರೆ ಅಲ್ಲಿಯೆ ಚಿಕಿತ್ಸೆ ನೀಡಿ ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ನುರಿತ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೆಕೆಂದು ಹೇಳಿದರು.
ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯಗುರುಗಳಾದ ಬಸವರಾಜ್ ಬಶೆಟ್ಟಿ ಅವರು ಮಾತನಾಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಲೀನಾ ನಾಯಕ್, ಡಾ. ಪ್ರಿಯಾಂಕ, ಡಾ.ಅಲ್ತಾಫ್,ಗ್ರಾಮ ಪಂಚಾಯತಿ ಅಧ್ಯಕ್ಷರ ಮೀನಾಕ್ಷಿ,ಗ್ರಾಮದ ಯುವ ಮುಖಂಡರು ಚ,ಸಂತೋಷ ರೆಡ್ಡಿ,ಸಾಯಿ ಭೋಸ್ಲೆಎಬಿವಿಪಿ ರಾಜ್ಯಕಾರಕಣಿ ಸದಸ್ಯರು, ಸಂಜುಗೌಡ,ಭರತ್, ಪವನ್ ಕುಂಬಾರ್ ಕಾಲೇಜ್ ಕಾರ್ಯದರ್ಶಿ ಪವನ್ ಪಾಂಚಾಳ್,ಸಿದ್ದು ಅಭಿಷೇಕ್,ಅಮಿತ್,ದಿನೇಶ್,ಸಾಯಿನಾಥ್,ಸತೀಶ್ ಅಂಬರೀಶ್,ಓAಕಾರ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಇತರರಿದ್ದರು