ವಿಶ್ವಗುರು ಬಸವಣ್ಣನಿಗೆ ಸರಿಸಮನಾಗಿ ಸಿಎಂ ಸಿದ್ದು ಕಟೌಟ್ | ಬಸವಭಕ್ತರ ಆಕ್ರೋಶ

ಬೀದರ್‌: ವಿಶ್ವಗುರು ಬಸವಣ್ಣನಿಗೆ ಸರಿಸಮನಾಗಿ ಸಿಎಂ ಕಟೌಟ್ ಹಾಕಿದಕ್ಕೆ ಬಸವಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ಕಟೌಟ್ ಗೆ ಬಾರಿ ವಿರೋಧ ಉಂಟಾಗಿದೆ. ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣ ಎಲ್ಲಿ, ಜಾತಿವಾದಿ ಸಿಎಂ ಸಿದ್ದರಾಮಯ್ಯ ಎಲ್ಲಿ ಎಂದು ಆಕ್ರೋಶ ವ್ಯಕ್ತವಾಗಿದೆ.

ಅಭಿನಂದನಾ ಸಮಾರಂಭ ನಡೆಯುವ ಥೇರು ಮೈದಾನದ ಮುಂಭಾಗ ಕಟೌಟ್ ಗಳುನ್ನು ಹಾಕಲಾಗಿದ್ದು,ಇದನ್ನು ಕಂಡ ಅಲ್ಲಿನ ಜನ ಸಿಡಿಮಿಡಿಗೊಂಡಿದ್ದಾರೆ.

ಬಸವಣ್ಣನನ್ನು ಕನ್ನಡದ ಸಾಂಸ್ಕೃತಿಕ ನಾಯಕ ಮಾಡಿದ್ದು ಹೆಮ್ಮೆ ಇದೆ ಆದರೆ ಸಿಎಂ ಹೋಲಿಕೆಗೂ ಒಂದು ಮಿತಿ ಇರಬೇಕು. ಜಾತಿ ರಹಿತ ಸಮಾಜದ ಸಂದೇಶವನ್ನು ಸಾರಿದ್ದು ಬಸವಣ್ಣ, ಆದ್ರೆ ಜಾತಿವಾದಿ ಸಿಎಂ ಸಿದ್ದರಾಮಯ್ಯ ಬಸವಣ್ಣನವರ ಜೊತೆ ಹೋಲಿಕೆ ಖಂಡನೀಯ ಎಂದು ಬಸವಕಲ್ಯಾಣದ ಜನ್ರು ಬಸವಣ್ಣ ಸರಿಸಮನಾದ ಕಟೌಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಿಸಿದ್ದಾರೆ.

Latest Indian news

Popular Stories