ಬೀದರ್: ಇತ್ತೀಚೀನ 10 ವರ್ಷಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ನಾಲ್ಕು ಕಾಲುಗಳಿಲ್ಲ. ಬರೀ ಮೂರು ಕಾಲುಗಳು ಮಾತ್ರ ಉಳಿದುಕೊಂಡಿವೆ. ಪತ್ರಿಕಾರಂಗವೆAಬ ಕಾಲು ಕಳಚಿ ಹೋಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಯಾಗಿರುವ ಬಸವರಾಜ ಬುಳ್ಳಾ ಲೇವಡಿ ಮಾಡಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ 10 ವರ್ಷಗಳಿಂದ ನರೇಂದ್ರ ಮೋದಿಯವರ ಅವಧಿಯಲ್ಲಿ ಮಾದ್ಯಮ ಕ್ಷೇತ್ರ ಹತ್ತಿಕ್ಕಲಾಗಿದೆ. ಹಿಂದಿನ ಎಲ್ಲ ಪ್ರಧಾನಿಗಳು ವಿದೇಶ ಪ್ರವಾಸಕ್ಕೆ ಹೋಗುವಾಗ, ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾಹಿತಿ ನೀಡುತ್ತಿದ್ದರು.
ಸಾಧ್ಯವಾದರೆ ಬಹುತೇಕ ಕಡೆ ಪತ್ರಕರ್ತರನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿರುವ ಉದಾಹರಣೆಗಳಿವೆ. ಆದರೆ ಪ್ರಧಾನಿ ನರೇಂದ್ರ ಮೋದಿಜಿಯವರು ಯಾರೋಬ್ಬ ಪತ್ರಕರ್ತರನ್ನು ಸನಿಹಕ್ಕೆ ಸೇರಿಸದೆ ಮಾಧ್ಯಮ ಕ್ಷೇತ್ರದ ಸ್ವಾತಂತ್ರ್ಯ ಕಬಳಿಸಲು ಹೊರಟಿರುವರು ಎಂದು ಆರೋಪಿಸಿದರು, ಇತ್ತಿಚೀನ 10 ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ.
ನಿರುದ್ಯೋಗ ಸಮಸ್ಯೆ ಗಗನ ಚುಂಬಿಸುತ್ತಿದೆ. ಜಾತಿಯತೆ, ಕೋಮು ಸಾಮರಸ್ಯ ಹಾಳಾಗಿ ಹೋಗಿದೆ. ಕೈಗಾರಿಕೆಗಳು ಬೆಳವಣಿಗೆಯಾಗಿಲ್ಲ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ನಿರುದ್ಯೋಗಿ ಯುವಜನರಿಗೆ ಯಾವುದೇ ಅವಕಶ ನೀಡದೇ ಬರೀ ರಾಮ ಮಂದಿರ ಜಪ ಮಾಡಿ ಜನರ ದಾರಿ ತಪ್ಪಿಸುವ ಕಾರ್ಯ ಆಗಿದೆ ಎಂದರು. ತಾನು ಲೋಕಸಭೆ ಚುನಾವಣೆಯ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ: ತಾನು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿAದ ಸ್ಪರ್ಧಿಸಲು ಇಚ್ಛೆಯುಳ್ಳವನಾಗಿದ್ದು, ವಿದ್ಯಾವಂತನಾಗಿರುವೆ.
ಸಾಕಷ್ಟು ಅಡಳಿತದ ಅನುಭವವು ಹೊಂದಿದ್ದೇನೆ. ನನಗೆ ಟಿಕೇಟ್ ನೀಡಿದರೆ ನನ್ನದೇ ಕಲ್ಪನೆಯಲ್ಲಿ 10 ವಿನೂತನ ಗ್ಯಾರಂಟಿಗಳನ್ನು ಸಿದ್ದಪಡಿಸಿದ್ದೇನೆ.
1. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಬೀದರನಿಂದ ಬಳ್ಳಾರಿವರೆಗೆ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ,
2. ಬೀದರ ಬೆಂಗಳೂರು, ಬೀದರ ಮುಂಬೈ ಬೀದರ ನವದೆಹಲಿಗೆ ವಿಮಾನ ಸೇವೆ.
3. ಬೆಂಗಳೂರು, ನವದೆಹಲಿಗೆ ಬೀದರ ಮೂಲಕ ರೈಲು ಸೇವೆ.
4. ಮಹಾತ್ಮಾ ಬಸವೇಶ್ವರರ ಪವಿತ್ರ ಸ್ಥಳವಾದ ಬಸವ ಕಲ್ಯಾಣದವರೆಗೆ ರೈಲು ಮಾರ್ಗ ವಿಸ್ತರಣೆ ಮತ್ತು ವಿಮಾನ ನಿಲ್ದಾಣದ ಸ್ಥಾಪನೆ.
5. ನಿರುದ್ಯೋಗಿ ಯುವಕರಿಗೆ ಭಾರತ ಸರ್ಕಾರದ, ಸಾರ್ವಜನಿಕ ವಲಯ, ಕೈಗಾರಿಕೆ ಉದ್ಯಮ ಸ್ಥಾಪನೆ.
6. ಐಟಿಬಿಟಿ ಮತ್ತು ಜವಳಿ, ಪಾರ್ಕ್ ಸ್ಥಾಪನೆ.
7. ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ.
8. ಕಾರಂಜಾ ಯೋಜನೆಯ ಭೂಮಿ ಮುಳುಗಡೆಯಾದವರಿಗೆ ಉತ್ತಮ ಪರಿಹಾರ ಹಾಗೂ ಹಣ ಪಾವತಿ.
9. ಉತ್ತಮ ಆರೋಗ್ಯ ಸೇವೆಗಾಗಿ ಸೂಪರ್ ಸ್ಪೆಷಾಲಿಟಿ, ಆಸ್ಪತ್ರೆ ಸ್ಥಾಪನೆ.
10. ಬೀದರ ನಗರದ ಸೌಂದರ್ಯೀಕರಣ ಮತ್ತು ಜಹಿರಾಬಾದವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಒಟ್ಟಾರೆ ಬೀದರ್ ಲೋಕಸಭೆ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಇರಾದೆ ನನ್ನ ಮುಂದಿದೆ ಎಂದು ಬಸವರಾಜ ಬುಳ್ಳಾ ತಿಳಿಸಿದರು.