Bidar
ಕಾಡು ಹಂದಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಪರಿಹಾರ ಚೆಕ್ ವಿತರಣೆ

ಬೀದರ್ ದಕ್ಷಿಣ ಮತಕ್ಷೇತ್ರದ ಹೋಕ್ರಾಣ ಕೆ ಗ್ರಾಮದಲ್ಲಿ ಜೋಳ ಕಟಾವಿಗೆ ತೆರಳಿದ ಸಂದರ್ಭದಲ್ಲಿ ಕಾಡು ಹಂದಿ ದಾಳಿಯಿಂದ ಮೃತಪಟ್ಟ ಕವಿತಾ ರವಿಕುಮಾರ್ ಅವರ ಮನೆಗೆ ರಾಜ್ಯ ಅರಣ್ಯ ಹಾಗೂ ಜೈವಿಕ ಮತ್ತು ಪರಿಸರ ಖಾತೆಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಇಂದು ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಿದರು.
ಈ ಸಂಧರ್ಭದಲ್ಲಿ ಬೀದರ್ ದಕ್ಷಿಣ ಮತಕ್ಷೇತ್ರದ ಶಾಸಕ ಮತ್ತು ಅರಣ್ಯ ಇಲಾಖೆ ವಿವಿಧ ಅಧಿಕಾರಿಗಳು ಜೊತೆಗಿದ್ದರು.