ಹುಮ್ನಾಬಾದ್: ತಾಲ್ಲೂಕಿನ ಧುಮ್ಮನಸೂರಿನಲ್ಲಿ ಸಿಡಿಲು ಬಡಿದು ಕಾರ್ಮಿಕ ಸಾವು


ಕೂಲಿ ಕೆಲಸ ಮಾಡುತಿದ್ದ ಕಾರ್ಮಿಕ ಸಿಡಿಲು ಬಡಿದ ಮೃತಪಟ್ಟಿ ಘಟನೆ ತಾಲ್ಲೂಕಿನ ಧುಮ್ಮನಸೂರಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.


ಮೃತ ವ್ಯಕ್ತಿಯನ್ನು ಚಿಟಗುಪ್ಪ ತಾಲ್ಲೂಕು ಬೆಳಕೇರಾ ಗ್ರಾಮದ ನಿವಾಸಿ ಚಂದ್ರಕಾಂತ ಬಸವರಾಜ ( 25) ಎಂದು ಗುರುತಿಸಲಾಗಿದೆ.


ಧುಮ್ಮನಸೂರ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಯಲ್ಲಿ ಗಾರೆ ಕೆಲಸದಲ್ಲಿದ್ದಾಗ ಸಂಜೆ ಗುಡುಗು ಸಮೇತ ಮಳೆ ಸುರಿಯುತಿದ್ದಾಗ ಈ ಅವಘಡ ಸಂಭವಿಸಿದ್ದಾಗಿ ತಿಳಿದುಬಂದಿದೆ.

ಘಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಂಜುಮ್ ತಬಸುಮ್, ಪಿಎಸ್ಐ ಬಸವರಾಜ, ಕಂದಾಯನಿರೀಕ್ಷಕ ರಾಹುಲ್, ಪಂಚಾಯತಿ ಅಧ್ಯಕ್ಷ ವೀರಪ್ಪ ಭೂತಾಳೆ ಆಸ್ಪತ್ರೆಗೆ ಭೇಟಿನೀಡಿ, ಪರಿಶೀಲಿಸಿದ್ದಾರೆ. ಘಟನೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Latest Indian news

Popular Stories