ಮಹಿಳಾ ಸಹೋದ್ಯೋಗಿ ಜೊತೆ ಅಸಭ್ಯ ವರ್ತನೆ; ಪಿಡಿಒ, ಕರ ವಸೂಲಿಗಾರನಿಗೆ ಹಿಗ್ಗಾಮುಗ್ಗಾ ಥಳಿತ!

ಮಹಿಳಾ ಸಹೋದ್ಯೋಗಿ ಜೊತೆ ಅಸಭ್ಯವಾಗಿ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಕರವಸೂಲಿಗಾರನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.. ಬೀದರ್‌ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕಿನ ಹಾರಕೂಡ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ..

ಪಿಡಿಓ ಯೋಗೀಶ್ ಹಿರೇಮಠ ಮತ್ತು ಕರವಸೂಲಿಗಾರ ಮಿಥುನ್ ಎಂಬುವವರಿಗೆ ಜನರು ಧರ್ಮದೇಟು ನೀಡಿದ್ದಾರೆ.. ಇವರು ಪಂಚಾಯಿತಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.. ಈ ಸಂಬಂಧ ಪ್ರಶ್ನೆ ಮಾಡಲು ಗ್ರಾಮಸ್ಥರು ಪ್ರಂಚಾಯತ್‌ ಕಚೇರಿಗೆ ಹೋಗಿದ್ದರು.. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ.. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು, ಇಬ್ಬರೂ ಅಧಿಕಾರಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ..

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.. ತಾಲ್ಲೂಕು ಪಂಚಾಯತ್‌ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಬಂದು ಜನರನ್ನು ಸಮಾಧಾನ ಮಾಡಿದ್ದಾರೆ.. ಇದೇ ವೇಳೆ ಇಬ್ಬರೂ ಆರೋಪಿಗಳು ಸಹೋದ್ಯೋಗಿ ಮಹಿಳೆಯ ಕ್ಷಮೆ ಕೇಳಿದ್ದಾರೆ ಎಂದು ತಿಳಿದುಬಂದಿದೆ..

Latest Indian news

Popular Stories