ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದವಾಗಿರುವ ಬೀದರ್ ನಗರದ ಪಾಪನಾಸ ದೇವಸ್ಥಾನದ ಶಿವಲಿಂಗಕ್ಕೆ ಮಹಾಶಿವರಾತ್ರಿಯ ನಿಮಿತ್ತ ಜಿಲ್ಲೆಯ ವಿವಿಧ ಭಾಗಳಿಂದ ದರ್ಶನಕ್ಕೆ ಶುಕ್ರವಾರ ಸಾಗ ರೊ ಪಾದಿಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು.
ಶಿವಭಕ್ತರು ಉಪವಾಸ ವ್ರತ ಆಚರಿಸುವ ಮುಖಾಂತರ ಸೃಷ್ಟಿಕರ್ತ ಅದಿಯೋಗಿ ಶಿವನನ್ನು ವರೆಸಿಕೊಳ್ಳುವ ಹಬ್ಬ ಈ ಮಹಾಶಿವರಾತ್ರಿ
ಮಹಾಶಿವರಾತ್ತಿ ಪ್ರಯುಕ್ತ ಜಿಲ್ಲೆಯ ಪಾಪನಾಶ ದೇವಸ್ಥಾನದಲ್ಲಿ ನಸುಕಿನ ಜಾವದಿಂದಲೆ ಭಕ್ತರು ಕಲ್ಯಾಣಿಯಲ್ಲಿ ಸ್ನಾನ ಮಾಡಿ ಸರದಿಯಲ್ಲಿ ನಿಂತು ಭೋಲೇನಾಥನಿಗೆ ರುದ್ರಾಭಿಷೆಕ ,ವಿಶೆಷ ಪೂಜೆ ,ಹಾಗೂ ದರ್ಶನ ಪಡೆದು ಪುನೀತರಾದರು.
ಶ್ರೀ ರಾಮಚಂದ್ರನ್ನು ರಾವಣನನ್ನು ಸಂಹರಿಸಿ ನಗರದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಧಿವ ಸ್ಥಾಪಿಸಿ ತನ್ನ ಪಾಪವನ್ನು ಪರಿಹರಿಸಿಕೊಂಡ ಸ್ಥಳವೇ ಈ ಪಾಪನಾಶ ಎಂದು ಪುರಾಣಗಳಲ್ಲಿ ಉಲ್ಲೆಖಿಸಲಾಗಿದೆ.ಹೀಗಾಗಿ ಪಾಪನಾಸ ದೇವಸ್ಥಾನದ ಶಿವಲಿಂಗಕ್ಕೆ ಶ್ರದ್ದೆ, ಭಕ್ತಿಯಿಂದ ದರ್ಶನ ಪಡೆದರೆ ತಮ್ಮ ಇಷ್ಟಾರ್ಥ ಈಡೇರುತ್ತೆ ಎನ್ನುವ ನಂಬಿಕೆಯು ಇದೆ.ಹೀಗಾಗಿ ಗಂಗಾ ಆರಾಧನೆ ಮಾಡಿ ಶಿವನ ಆಶೀರ್ವಾದ ಪಡೆಯುವುದು ವಾಡಿಕೆ ಎನ್ನುತ್ತಾರೆ ಭಕ್ತರು
ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಪೊಲೀಸ್ ರು ಭಾರಿ ಬೀಗಿ ಬಂದೊಬಸ್ತ್ ಮಾಡಿದ್ದಾರೆ.