ಮುಂಗಾರು: ಭೂಮಿ ಹದ ಮಾಡಲು ಮುಂದಾದ ರೈತರು

ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.

ಜಿಲ್ಲೆಯ ಔರಾದ್, ಹುಮನಾಬಾದ್ ,ಭಾಲ್ಕಿ ಸೇರಿದಂತೆ ಇನ್ನಿತರ ತಾಲ್ಲೂಕಿನಲ್ಲಿ ಕೆಲವು ರೈತರು ಭೂಮಿ ಹದ ಮಾಡಿದ್ದು ಉದ್ದು, ಹೆಸರು, ಸೋಯಾ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ತಯಾರಿ ನಡೆಸುತ್ತಿದ್ದಾರೆ.

ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದರೆ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಬಿತ್ತನೆಯಾದರೆ ಬೆಳೆ ಹುಲುಸಾಗಿ ಬರುತ್ತದೆ. ಅಲ್ಲದೆ ಬೆಳೆಗೆ ರೋಗಗಳೂ ಕಡಿಮೆ. ಬೆಳೆ ಹುಲುಸಾಗಿ ಬೆಳೆದು ಹೆಚ್ಚು ಇಳುವರಿ ನೀಡುತ್ತದೆ’ ಎಂದು ಹಿರಿಯ ರೈತ ಧನರಾಜ ತಿಳಿಸುತ್ತಾರೆ.

ಈ ಸಮಯದಲ್ಲಿ ರೈತರು ಮಾಗಿ ಉಳುಮೆಗೆ ಮುಂದಾಗಬೇಕು. ಹೀಗೆ ಮಾಡುವುದರಿಂದ ಈ ಹಿಂದೆ ಬೆಳೆಗೆ ಕಾಡುವ ಕೀಟಗಳ ಮೊಟ್ಟೆ ಬಿಸಿಲಿಗೆ ಒಡೆಯುತ್ತವೆ. ಮುಂದೆ ಬೆಳೆಯುವ ಬೆಳೆಗೆ ಶೇ 50-70 ರೋಗ ಉಂಟಾಗುವುದನ್ನು ತಡೆಗಟ್ಟಬಹುದು. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಬಿತ್ತನೆ ಮಾಡುವುದರಿಂದ ಮಣ್ಣಿನ ಸವಕಳಿ ನಿಲ್ಲಿಸಬಹುದು. ಭೂಮಿ ಹದ ಆದ ಮೇಲೆ ಬಿತ್ತನೆಗೂ ಮೊದಲು 15 ದಿನ ಮುಂಚೆ ತಿಪ್ಪೆಗೊಬ್ಬರವನ್ನು ಬಿಸಿಲು ಇಲ್ಲದಿದ್ದಾಗ ಭೂಮಿಗೆ ಸೇರಿಸಬೇಕು. ಕಾರಣ ತಾಪಮಾನ ಹೆಚ್ಚಾದರೆ ಕೊಟ್ಟಿಗೆ ಗೊಬ್ಬರದಲ್ಲಿ ಪೋಷಕಾಂಶಗಳು ಕಡಿಮೆಯಾಗುತ್ತವೆ’ ಎಂದು ರೈತ ಮಲ್ಲಿಕಾರ್ಜುನ ಹೇಳಿದ್ದಾರೆ

Latest Indian news

Popular Stories