ಮದ್ಯದ ಏಳು ಅಂಗಡಿಗಳಿಗೆ ಕನ್ನ ಹಾಕಿದ ಆರು ಜನರ ಬಂಧನ, ₹9.74 ಲಕ್ಷ ಮೌಲ್ಯದ ವಸ್ತು ಜಪ್ತಿ ನಗರದಲ್ಲಿ ಎಸ್ಪಿ ಚೆನ್ನಬಸವಣ್ಣ ಮಾಹಿತಿ….

ಬೀದರ್ : ಜಿಲ್ಲೆಯ ಏಳು ಮದ್ಯ ಅಂಗಡಿಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬುಧವಾರ ಬಂಧಿಸಿದ್ದಾರೆ.

ಕಳ್ಳತನಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಹಾಗೂ ಕಳವು ಮಾಡಿದ ಮದ್ಯವನ್ನು ಖರೀದಿಸಿದ ಒಬ್ಬ ಆರೋಪಿಯನ್ನು ಬೀದರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಯಿಂದ ₹19 ಸಾವಿರ ಮೌಲ್ಯದ 43 ,200 ಎಂ.ಎಲ್‌. ಮದ್ಯ.. ₹4.25 ಲಕ್ಷ ನಗದು, ₹30 ಸಾವಿರ ಬೆಲೆಯ ಬೈಕ್‌ .₹5 ಲಕ್ಷದ ಟಾಟಾ ಏಸ್‌ ವಾಹನ .ಅಂಗಡಿ ಶಟರ್‌ ಎತ್ತಲು ಬಳಸಿದ ಕಬ್ಬಿಣದ ಹಾರೆ, ಎರಡು ಕಬ್ಬಿಣದ ರಾಡುಗಳು ಸೇರಿದಂತೆ ಒಟ್ಟು ₹9.74 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌.ಮಾಹಿತಿ ನೀಡಿದ್ದಾರೆ.

ಬಸವಕಲ್ಯಾಣ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೂರು, ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿ ಎರಡು, ಮೆಹಕರ್‌ ಹಾಗೂ ಧನ್ನೂರ ಪೊಲೀಸ್‌ ಠಾಣೆ ವ್ಯಾಪ್ತಿಯ ವೈನ್‌ಶಾಪ್‌ಗಳಲ್ಲಿ ಕಳವು ಮಾಡಿದ ಕುಖ್ಯಾತ ಕಳ್ಳ ರನ್ನು ಬಂಧಿಸುವಲ್ಲಿ ಬೀದರ ಜಿಲ್ಲಾ ಪೋಲಿಸರು ಯಶಸ್ವಿ ಯಾಗಿದ್ದರಾರೆ ಈ ಕಾರ್ಯಚರಣೆ ಯಲ್ಲಿ ಭಾಗಿಯಾದ ಪೋಲಿಸರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ ಎಲ್ ನೀಡಿದ್ದಾರೆ.

Latest Indian news

Popular Stories