ರಾಮನ ವಿರೋಧಿಸುವರಿಗೆ ಕಾಮಲೆ ಆಗಿದೆ.– ರಾಜೇಶ್ವರ ಶ್ರೀಗಳು.

ಬೀದರ್ : ರಾಮನನ್ನ ಯಾರು ವಿರೋಧಿಸುತ್ತಾರೋ ಅವರಿಗೆಲ್ಲಾ ಕಾಮಾಲೆ ಆಗಿದೆ ಎಂದು ರಾಜೇಶ್ವರ ಶಿವಾಚಾರ್ಯ ಶ್ರೀ ಹಾಗೂ ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ ಹೇಳಿದ್ರು.

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ಬೀದರನಲ್ಲಿ ಅದ್ದೂರಿ ರಾಮಲೀಲಾ ಉತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ಸ್ವಾಮೀಜಿಗಳು ತಿಳಿಸಿದ್ರು.

ಜನೇವರಿ 21 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಸುಪ್ರಸಿದ್ದ ಕಲಾವಿದರಿಂದ ಸಂಗಿತ ಉತ್ಸವ ಕಾರ್ಯಕ್ರಮ ಮತ್ತು ಜನೇವರಿ 22 ರಂದು ಸಂಜೆ 5 ಗಂಟೆಗೆ ಸಾಮೂಹಿಕ ಕಾರ್ಯಕ್ರಮ ನಡೆಯಲ್ಲಿದ್ದು.ಸಂಜೆ 5.30 ನಿಮಿಷಕ್ಕೆ ಶ್ರೀ ರಾಮನ ಮೂರ್ತಿಗೆ ಸರ್ವ ಪೂಜ್ಯರಿಂದ ಅಭಿಷೇಕ ಮತ್ತು ಸಾಮೂಹಿಕ ಹನುಮಾನ ಚಾಲಿಸ್ ಪಠಣ ಹಾಗೂ ರಾಮನ ವೇಷಧಾರಿ ಮಕ್ಕಳಿಗೆ, ಪೂಜ್ಯರು ಹಾಗೂ ಸ್ವಾಮೀಜಿಗಳಿಂದ ಪುಷ್ಪಾರ್ಚಣೆ ಮಾಡಲಾಗುವುದು ಜೊತೆಗೆ ರಾಮನ ಸೇವೆಯಲ್ಲಿ ಭಾಗಿಯಾದ ಕರಸೇವಕರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ಜಿಲ್ಲೆಯ ಮಠಾಧೀಶರ ಒಕ್ಕೂಟದ ಹಾಗೂ ಶ್ರೀ ರಾಮಲೀಲಾ ಉತ್ಸವ ಸಮಿತಿಯವರು ತಿಳಿಸಿದ್ದರು.

Latest Indian news

Popular Stories