ಬೀದರ ನಗರದ ನೆಹರು ಕ್ರಿಡಾಂಗಣದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ 371 ಜೆ ದಶಮಾನೋತ್ಸವ ಹಿನ್ನಲೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಮಾತಾನಾಡಿದ ರಾಜ್ಯ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಯವರು ಬಿಜೆಪಿ ವಿರುದ್ದ ಟಾಕ್ ವಾರ್ ನಡೆಸಿದ್ದರು,ಬಿಜೆಪಿಯವರು ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನೆಮಾಡಿದ್ದು ,ಕೇವಲ ಹೆಸರು ಬದಲಾಯಿಸಿದ್ರೆ ನಮ್ಮ ಭಾಗದ ಅಭಿವೃದ್ದಿ ಸಾಧ್ಯವೇ ? ಕಳೆದ ಸರಕಾರ ನೆಪ ಮಾತ್ರಕ್ಕೆ ಅನುದಾನ ನೀಡಿ ಅದನ್ನು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಖರ್ಚು ಮಾಡಿಲ್ಲ ,ಅದ್ರೆ ನಮ್ಮ ಸರಕಾರ ಮಾತ್ರ ಕಲ್ಯಾಣ ಕರ್ನಾಟಕ ಭಾಗಕ್ಕೆ ವರ್ಷ್ಕಕ್ಕೆ 5000 ಕೋಟಿ ಅನುದಾನ ನೀಡಲಿದ್ದು,ನಮ್ಮ ಭಾಗದ ಅಭಿವೃದ್ದಿ ಯಾಗಲು ಸಹಕಾರಿ ಯಾಗುತ್ತೆ ಎಂದ್ರು
ಇದೇ ವೇಳೆ ಬೀದರ್ ಸಂಸದ ಭಗವಂತ್ ಖೂಬಾ ವಿರುದ್ದ ಕಿಡಿಕಾರಿದ್ದು ನೆಪ ಮಾತ್ರ ಕ್ಕೆ ಅನೇಕ ಕೇಂದ್ರ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದಾರೆ.ಒಂದು ಕೂಡ ಪರಿಪೂರ್ಣಗೊಂಡಿಲ್ಲ ,ನೀವುಗಳು ಮುಂಬರುವ ಚುನಾವಣೆಯಲ್ಲಿ ಖೂಬಾಗೆ ತಕ್ಕ ಪಾಠ ಕಲಿಸಬೇಕು ಎಂದರು