Chamarajanagar

ಎಷ್ಟೇ ಆಪಾದನೆ ಹೊರಿಸಿದರೂ ಸಿದ್ದರಾಮಯ್ಯರವರೆ 5 ವರ್ಷ ಸಿಎಂ’ – ಸುನಿಲ್ ಬೋಸ್

ಚಾಮರಾಜನಗರ, ನವೆಂಬರ್, 22: ಮುಡಾ ಹಗರಣ ಆರೋಪ ಕೇಳಿ ಬಂದಾಗಿನಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ವಿಪಕ್ಷ ನಾಯಕರು ಒತ್ತಾಯಿಸುತ್ತಲೇ ಇದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಏನೇ ಆಪಾದನೆ ಹೊರಿಸಿದರೂ ಅವರೇ 5 ವರ್ಷ ಸಿಎಂ‌ ಎಂದು ಸಂಸದ ಸುನಿಲ್ ಬೋಸ್ ಅವರು ಹೇಳಿದರು.

ಚಾಮರಾಜನಗರದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದೇ ಬಿಜೆಪಿಯು ವಕ್ಫ್, ರೇಷನ್ ಕಾರ್ಡ್‌ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ. ಸುಳ್ಳು ಆರೋಪ, ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳನ್ನೇ ಸತ್ಯ ಎಂದು ಜನರಿಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರ ಮೇಲೆ ಆಪಾದನೆ ಹೊರಿಸಿದಷ್ಟು ಅವರು ಮತ್ತಷ್ಟು ಗಟ್ಟಿಯಾಗುತ್ತಾರೆ. ಅವರ ಜನಪ್ರಿಯತೆಯನ್ನು ಯಾರೂ ಏನು ಮಾಡಗಲು ಆಗಲ್ಲ. ಏನೇ ಅಪಾದನೆ ಹೊರಿಸಿದರೂ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

ಮೊದಲ ಸಭೆಯೇ ಎರಡು ತಾಸು ತಡ: ಚಾಮರಾಜನಗರ ಸಂಸದ ಸುನೀಲ್ ಬೋಸ್ ಅಧ್ಯತೆಯಲ್ಲಿ ಇಂದು ಮೊದಲ ದಿಶ ಸಭೆ ನಡೆಯಿತು‌. ‌ಆದರೆ, ಮೊದಲ ದಿಶಾ ಸಭೆಯೇ ನಿಗದಿತ ಸಮಯಕ್ಕಿಂತ 2 ತಾಸು ತಡವಾದ್ದರಿಂದ ಅಧಿಕಾರಿಗಳು ಹೈರಾಣಾದರು.

ಚಾಮರಾಜನಗರ ಸಂಸದ ಸುನೀಲ್ ಬೋಸ್ ಅಧ್ಯಕ್ಷತೆಯಲ್ಲಿ ಇಂದು 10:30ಕ್ಕೆ ನಡೆಯಬೇಕಿದ್ದ ದಿಶಾ ಸಭೆ ಮಧ್ಯಾಹ್ನ 12 ಆದರೂ ಆರಂಭಗೊಳ್ಳದ ಹಿನ್ನೆಲೆ ಅಧಿಕಾರಿಗಳು ಸುಸ್ತಾದರು. ಶುಕ್ರವಾರ ಬೆಳಗ್ಗೆ 12 ಆದರೂ ಕೂಡ ಸಂಸದರು ಬಾರದ ಹಿನ್ನೆಲೆ ಅಧಿಕಾರಿಗಳು ಕಾದು ಕಾದು ಹೈರಾಣಾದರು. ಇನ್ನು, ಬೆಳಗ್ಗೆ 10ಕ್ಕೆ ಉದ್ಘಾಟನೆ ಆಗಬೇಕಿದ್ದ ಸಂಸದರ ಕಚೇರಿ ಕೂಡ ಉದ್ಘಾಟನೆ ಆಗಲು ಎರಡು ತಾಸು ತಡವಾಗಿದೆ‌.

ಅಧಿಕಾರಿಗಳಿಗೆ ತರಾಟೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗ್ರಾಮೀಣ ಕುಡಿಯುವ ನೀರು ಇಲಾಖೆ, ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸಂಸದ ಬೋಸ್ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಅಪೂರ್ಣ ಮಾಹಿತಿ, ಕಳಪೆ ಕಾಮಗಾರಿ, ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಸಿದ್ದನ್ನು ಪ್ರಶ್ನಿಸಿ ಸಂಸದರು ಮತ್ತು ಶಾಸಕರು ಗರಂ ಆದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button