ಎಟಿಎಂನಲ್ಲಿ ಅಗ್ನಿ ಅವಘಡ; ಸುಟ್ಟು ಕರಕಲಾದ ಲಕ್ಷ ಲಕ್ಷ ಹಣ

ಚಿಕ್ಕಮಗಳೂರು: ನಗರದ ಎಟಿಎಂ ಒಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ನಡೆದು ಐದು ಲಕ್ಷ ರೂಪಾಯಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

ನಗರ ಐ.ಜಿ.ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂಗೆ ಭಾನುವಾರ ಮಧ್ಯರಾತ್ರಿ ಬೆಂಕಿ ತಗುಲಿ ಐದು ಲಕ್ಷ ರೂ. ಬೆಂಕಿಗೆ ಆಹುತಿಯಾಗಿದೆ.

ಎಟಿಎಂ ಕೊಠಡಿಯಲ್ಲಿ ಅಳವಡಿಸಿರುವ ಎಸಿ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಆವರಿಸಿದೆ ಎಂದು ಅಂದಾಜಿಸಲಾಗಿದೆ.

ಎಸಿಯಲ್ಲಿ ಕಾಣಿಸಿಕೊಂಡ ವಿದ್ಯುತ್‌ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಇಡೀ ಎಟಿಎಂ ಆವರಿಸಿದ್ದು ಎಟಿಎಂ ನಲ್ಲಿದ್ದ ಐದು ಲಕ್ಷ ರೂ. ಬೆಂಕಿಗೆ ಸುಟ್ಟು ಕರಕಲಾಗಿದೆ. ಎಟಿಎಂ ಕೊಠಡಿಯಲ್ಲಿದ್ದ ಹಣ ತುಂಬುವ ಮೆಷಿನ್ ಹಾಗೂ ಎಟಿಎಂ ಮೆಷಿನ್ ಸುಟ್ಟು ಹೋಗಿದೆ.

ಎಟಿಎಂಗೆ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ‌ ಆಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಎಟಿಎಂ ಕೊಠಡಿ ಮೇಲ್ಬಾಗದಲ್ಲಿ ಕರ್ನಾಟಕ ಬ್ಯಾಂಕ್ ಶಾಖೆ ಇದ್ದು ದೊಡ್ಡ ಅನಾಹುತ ತಪ್ಪಿದೆ.

Latest Indian news

Popular Stories