ಕಲ್ಯಾಣಪುರ – ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ತುರ್ತು ಮುಗಿಸಲು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವ ಸಂತೆಕಟ್ಟೆ ಕೆಳಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಇವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಖುದ್ದು ವೀಕ್ಷಣೆ ಮಾಡಿದ ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಮಗಾರಿ ಅವಧಿ 18 ತಿಂಗಳಾಗಿದ್ದು, ಇನ್ನೂ ವಿಳಂಬ ಮಾಡುತ್ತಿರುವುದು ಮತ್ತು ಇದರೊಂದಿಗೆ ವಾಹನ ದಟ್ಟಣೆಯ ಸಮಸ್ಯೆಗಳು, ಸಂಚಾರದ ಗೊಂದಲಗಳು ನಿರ್ಮಾಣವಾಗುತ್ತಿದ್ದು, ಸಪ್ಟೆಂಬರ್ ಅಂತ್ಯದೊಳಗೆ ಭಾಗಶಃ ಕಾಮಗಾರಿಯನ್ನು ಮುಗಿಸಿ ವಾಹನ ಸಂಚಾರದ ಗೊಂದಲ ನಿವಾರಿಸಬೇಕೆಂದು ಸೂಚನೆ ನೀಡಿದರು.

1001230526 Civic issues, Udupi

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಮಾತಾಡಿದ ಕೋಟ, ಕಟಪಾಡಿ ಜಂಕ್ಷನ್ನಲ್ಲಿ ಸರ್ವೀಸ್ ರಸ್ತೆ ನಿಮಾಣ, ಸಾಣೂರು-ಬಿಕ್ಕರ್ನಕಟ್ಟೆ ಕಾಮಗಾರಿಯ ಪ್ರಗತಿ, ಎನ್.ಹೆಚ್ 169-ಎ ರಲ್ಲಿ ಮಲ್ಪೆ-ಕರಾವಳಿ ಬೈಪಾಸ್ ವರೆಗಿನ ಕಾಮಗಾರಿಯ ಸಮಸ್ಯೆಗಳು, ಇಂದ್ರಾಳಿ ಸೇತುವೆಯ ವಿಳಂಬ, ಅಂಪಲಪಾಡಿ ಮೇಲ್ಸೆತುವೆಯ ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬ, ಇವೆಲ್ಲವುದರ ಕುರಿತು ಸಮಗ್ರವಾಗಿ ಚರ್ಚೆ ಮಾಡಿದರು. ಸಭೆ ಮುಗಿಸಿ ಸಂತೆಕಟ್ಟೆ ಅಂಡರ್ ಪಾಸ್ನ ವೀಕ್ಷಣೆ ಸಂದರ್ಭದಲ್ಲಿ ವಿವರವಾದ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಸಂಸದರೊಂದಿಗೆ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿಗಳು ಡಾ. ಅರುಣ್ ಕುಮಾರ್,ರಶ್ಮಿ ಉಪವಿಭಾಗಾಧಿಕಾರಿಗಳು ಕುಂದಾಪುರ,ಭೂ ದಾಖಲೆಗಳ ಉಪನಿರ್ದೇಶಕರು, ಯೋಜನಾ ನಿರ್ದೇಶಕರು, ಹಾಗೂ ಸಂಬಂಧಪಟ್ಟ ಅದಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Latest Indian news

Popular Stories