ಹೊನ್ನಾವರ – ಭಾಸ್ಕೇರಿ ಬಳಿ ಗುಡ್ಡ ಕುಸಿತ :ಹೊನ್ನಾವರ ಸಾಗರ ರಸ್ತೆ ಸಂಚಾರ ಒಂದು ತಾಸಲ್ಲಿ ಸಹಜತೆಗೆ

ಕಾರವಾರ: ಭಾರೀ ಮಳೆ ಕಾರಣ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ರಾಷ್ಟ್ರೀಯ
ಹೆದ್ದಾರಿ ಭಾಸ್ಕೇರಿ ಎಂಬಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತ ದಿಂದ ಹೊನ್ನಾವರ ಸಾಗರ ರಸ್ತೆಯಲ್ಲಿ ಒಂದೊಂದೇ ವಾಹನಗಳು ನಿಧಾನಕ್ಕೆ ಚಲಿಸುತ್ತಿವೆ. ತಾಲೂಕು ಆಡಳಿತ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಕ್ರೇನ್ ಹಾಗೂ ಜೆಸಿಬಿ ತರಿಸಿ,ರಸ್ತೆಯಲ್ಲಿನ‌ ಬಂಡೆಗಲ್ಲು, ಮಣ್ಣು ತೆರವು ಕಾರ್ಯಾಚರಣೆ ಆರಂಭಸಿದ್ದಾರೆ.

IMG 20240627 WA0039 Climate and environment, Uttara Kannada IMG 20240627 WA0040 Climate and environment, Uttara Kannada

ರಾತ್ರಿ ಸಮಯ ಮಳೆ ಸುರಿಯುತ್ತಿರುವ ಕಾರಣ ರಸ್ತೆಗೆ ಬಿದ್ದ ಬಂಡೆಕಲ್ಲು ಎತ್ತುವ ಕಾರ್ಯಾಚರಣೆ ಬೆಳಿಗ್ಗೆ ಪ್ರಾರಂಭವಾಯಿತು. ಸ್ಥಳದಲ್ಲಿ ‌ಪೊಲೀಸರು ಬ್ಯಾರಿಕೇಡ್ ಹಾಕಿ ರಕ್ಷಣೆಗೆ ನಿಂತಿದ್ದಾರೆ.

ರಸ್ತೆಗೆ ಬಿದ್ದ ಕಲ್ಲು ಮಣ್ಣು ತೆಗೆಯುವ ಕಾರ್ಯಾಚರಣೆ ನಡೆದಿದೆ. ಇನ್ನೊಂದು ತಾಸಲ್ಲಿ ರಸ್ತೆ ಸಂಚಾರಕ್ಕೆ ಪೂರ್ಣ ಮುಕ್ತವಾಗಲಿದೆ.
2022 ರಲ್ಲಿ ಹೊನ್ನಾವರ ಸಾಗರ ನಡುವೆ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಬೆಳಿಗ್ಗೆ ಹೊತ್ತು ಮಳೆ ಕೊಂಚ ಬಿಡುವು ನೀಡಿದೆ.

Latest Indian news

Popular Stories