‘ದಿಲ್ಲಿಯ ಮುಂಗೇಶ್‌ಪುರದಲ್ಲಿ ಗರಿಷ್ಠ ತಾಪಮಾನ 52.9 ಡಿಗ್ರಿ ಸೆಲ್ಸಿಯಸ್‌ ದಾಖಲು, ಸಂವೇದಕ ದೋಷ: ಹವಾಮಾನ ಇಲಾಖೆ

ಮೇ 29 ರಂದು ದೆಹಲಿಯ ಮುಂಗೇಶ್‌ಪುರ ಹವಾಮಾನ ಕೇಂದ್ರದಲ್ಲಿ 52.9 ಡಿಗ್ರಿ ಸೆಲ್ಸಿಯಸ್‌ನ ತಾಪಮಾನವು “ಸೆನ್ಸರ್‌ನ ಅಸಮರ್ಪಕ ಕಾರ್ಯ” ದ ಪರಿಣಾಮವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

ಮುಂಗೇಶಪುರದ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಸಂವೇದಕವು “ಸ್ಟ್ಯಾಂಡರ್ಡ್ ಉಪಕರಣವು ವರದಿ ಮಾಡಿದ ಗರಿಷ್ಠ ತಾಪಮಾನಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವನ್ನು” ತೋರಿಸುತ್ತಿದೆ ಎಂದು ಕಂಡುಹಿಡಿದಿದೆ.

ಅದೇ ದಿನ, ದೆಹಲಿಯ ಯಾವುದೇ ವೀಕ್ಷಣಾಲಯವು 50 ಡಿಗ್ರಿ ಗಿಂತ ಹೆಚ್ಚು ತಾಪಮಾನ ತೋರಿಸಿಲ್ಲ. ಕಳೆದ ಕೆಲವು ದಿನಗಳಿಂದ ದೆಹಲಿ ಬಿಸಿಗಾಳಿಯಿಂದ ತತ್ತರಿಸಿದೆ.

Latest Indian news

Popular Stories