ಮೇ 21ರಿಂದ 25ರವರೆಗೆ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ 

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಪ್ರಾಂತ್ಯಗಳಲ್ಲಿ ಮೇ 21ರಿಂದ 25ರವರೆಗೆ ಅಗಾಧವಾಗಿ ಮಳೆ ಸುರಿಯಲಿದ್ದು, ಆ ಭಾಗದ ಕರ್ನಾಟಕ ನೈಸರ್ಗಿಕ ಪ್ರಕೋಪ ನಿರ್ವಹಣಾ ಕೇಂದ್ರ (ಕೆಎಸ್ಎನ್ ಡಿಎಂಸಿ) ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಕೆಎಸ್ಎನ್ ಡಿಎಂಸಿ, ಮೇ 21 ರಿಂದ 25ರವರೆಗೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಗುಡುಗು, ಮಿಂಚು, ಜೋರಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇ 21ರಂದು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

ಮೇ 21ರಂದು ಕರಾವಳಿ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಲಿದೆ. ಇನ್ನು, ಮೇ 22ರಂದು ಸಹ ಗುಡುಗು, ಸಿಡಿಲು ಸಹಿತ ಮತ್ತಷ್ಟು ಮಳೆಯಾಗಲಿದೆ. ಕೆಲವು ಕಡೆಗೆಗಳಲ್ಲಿ ಆಲಿಕಲ್ಲುಗಳೂ ಬೀಳಬಹುದು ಎಂದು ಹೇಳಲಾಗಿದೆ. ಇದೇ ರೀತಿ, ಮೇ 23, 24 ಹಾಗೂ 25ರಂದು ಸಹ ಇದೇ ರೀತಿಯಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಮಳೆಯಾಗಲಿದೆ ಎಂದು ಹೇಳಲಾಗಿದೆ.

ಅಸಲಿಗೆ, ಮೇ 21ರಂದು ದಕ್ಷಿಣ ಒಳನಾಡಿನಲ್ಲಿ ಯಾವುದೇ ರೀತಿಯ ವಾರ್ನಿಂಗ್ ನೀಡಲಾಗಿಲ್ಲ. ಸಾಮಾನ್ಯದಿಂದ ಉತ್ತಮ ಮಳೆಯಾಗುತ್ತದೆ ಎಂದಷ್ಟೇ ಹೇಳಲಾಗಿದೆ. ಮೇ 22ರಂದು, ಗುಡುಗು- ಸಿಡಿಲು ಸಹಿತ ಭಾರೀ ಮಳೆಯಾಗಲಿದೆ. ಮೇ 23, 24, 25ರಂದೂ ಭಾರೀ ಮಳೆಯಾಗಲಿದೆ ಎಂದು ಹೇಳಿದ್ದಾರೆ.

ಮೇ 21ರಂದು ಉತ್ತಮ ಮಳೆಯಾಗಲಿದೆ. ಮೇ 22ರಂದು ಗುಡುಗು ಸಹಿತ ಮಳೆಯಾಗಲಿದ್ದು, ಮೇ 23ರಂದು ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಲಿದೆ. ಮೇ 24 ಹಾಗೂ 24ರಂದು ಸಹ ಇದೇ ರೀತಿ ಮಳೆಯಾಗಲಿದೆ ಎಂದು ಕೆಎಸ್ಎನ್ ಡಿಎಂಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್ಎನ್ ಡಿಎಂಸಿ ನೀಡಿರುವ ಮಳೆ ನಕ್ಷೆಯ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಮೇ 21ರಿಂದ 24ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು, ಉಡುಪಿಯ ದಕ್ಷಿಣ ಭಾಗದಲ್ಲಿರುವ ಕಾರ್ಕಳ, ಕಾಪು, ಮುಲ್ಕಿ ಪ್ರಾಂತ್ಯಗಳಲ್ಲಿ ಕೋಲಾರದ ಉತ್ತರ ಭಾಗದ ಕೆಲವು ಕಡೆ ಭಾರೀ ಬಿರುಸಿನಿಂದ ಕೂಡಿದ ಅಂದರೆ 64.5 ರಿಂದ 115.5 ಮಿ.ಮೀ.ನಷ್ಟು ಮಳೆಯಾಗಲಿದೆ.

ಇನ್ನು, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರಿನ ದಕ್ಷಿಣ ಭಾಗ, ಕೋಲಾರ, ಹಾಸನದ ಪಶ್ಚಿಮ ಭಾಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದ ಪಶ್ಚಿಮ ಭಾಗ, ಧಾರವಾಡ ಜಿಲ್ಲೆಯ ಪಶ್ಚಿಮ, ಮಧ್ಯ ಹಾಗೂ ಈಶಾನ್ಯ ಭಾಗಗಳಲ್ಲಿ ಅಂದಾಜು 15.6ರಿಂದ 64.4 ಮಿ.ಮೀ.ನಷ್ಟು ಮಳೆಯಾಗಲಿದೆ. ಇನ್ನು, ಮೇಲೆ ತಿಳಿಸಲಾದ ಪ್ರಾಂತ್ಯಗಳನ್ನು ಬಿಟ್ಟು ಉಳಿದೆಲ್ಲಾ ಕಡೆಗೆ ಹಗುರದಿಂದ ಸಾಧಾರಣ ಅಂದರೆ, 0.1 ಮಿ.ಮೀ.ನಿಂದ 15.5 ಮಿ.ಮೀ.ನಷ್ಟು ಮಳೆಯಾಗಲಿದೆ.

Latest Indian news

Popular Stories