ಚಮ್ಮಾರರು, ಚರ್ಮ ಕುಶಲಕರ್ಮಿಗಳಿಗೆ 2000/- ಪರಿಹಾರ ಧನ; ಅರ್ಜಿ ಆಹ್ವಾನ

ಬೀದರ ಜೂನ್ 7 (ಕರ್ನಾಟಕ ವಾರ್ತೆ):- ಕೋವಿಡ್-19 2ನೇ ಅಲೆಯ ಲಾಕಡೌನ್ ಹಿನ್ನೆಲೆಯಲ್ಲಿ ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿಯಲ್ಲಿ ಹಾಗೂ ಚರ್ಮಹದ ಮಾಡುವ ಕಾಯಕದಲ್ಲಿ ತೊಡಗಿರುವ ಚಮ್ಮಾರರು/ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಕೆಲವು ನಿರ್ಬಂಧನೆಗೊಳಪಟ್ಟು ತಾತ್ಕಾಲಿಕ ಪರಿಹಾರವಾಗಿ ಒಂದು ಬಾರಿ 2000/- ರೂ.ಗಳ ಪರಿಹಾರ ಧನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಬೀದರ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಫಲಾನುಭವಿಗಳು ಅನ್‌ಲೈನ್ ಮೂಲಕ ಸೇವಾ ಸಿಂಧು (sevasindu.karnataka.gov.in) ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂನ.15 ಕೊನೆಯ ದಿನಾಂಕವಾಗಿರುತ್ತದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಯಿಸಲಾಗುತ್ತದೆ.
ಪ್ರಯುಕ್ತ ಚಮ್ಮಾರರು, ಚರ್ಮ ಕುಶಲಕರ್ಮಿಗಳು ವಿಶೇಷ ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest Indian news

Popular Stories

error: Content is protected !!