ಸಾಮಾಜಿಕ ಮಾಧ್ಯಮ ವಿರುದ್ಧ ಬೈಡನ್ ಕಿಡಿ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಧ್ಯಮದ ವಿರುದ್ಧ ಕಿಡಿ ಕಾರಿದ್ದು. ಕೊರೊನಾ ಸೋಂಕು ಹಾಗೂ ಲಸಿಕೆ ಕುರಿತು ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವ ಮೂಲಕ ಜನರನ್ನು ಕೊಲ್ಲುತ್ತಿವೆ ಎಂದಿದ್ದಾರೆ.
ಕೊರೊನಾ ವೈರಸ್ ಮತ್ತು ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಟೀಕಿಸಿದ್ದಾರೆ.
ಲಸಿಕೆ ಪಡೆಯದವರಲ್ಲಿ ಮಾತ್ರ ಸಾಂಕ್ರಾಮಿಕ ಇರುವುದಾಗಿ ಹೇಳುವ ಮೂಲಕ ಸಾಮಾಜಿಕ ಮಾಧ್ಯಮಗಳು ಜನರನ್ನು ಕೊಲ್ಲುತ್ತಿವೆ ಎಂದಿರುವ ಅವರು ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವಿಕೆ ನಿಲ್ಲಿಸುವಲ್ಲಿ ಫೇಸ್ ಬುಕ್ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Latest Indian news

Popular Stories

error: Content is protected !!