ಕೋವಿಡ್-19 ಮೂರನೇ ಅಲೆ ತಡೆಯಲು ಬೀದರ ಜಿಲ್ಲಾಡಳಿತ ಈಗಿನಿಂದಲೇ ಸನ್ನದ್ಧ

ಬೀದರ ಮೇ 30 (ಕರ್ನಾಟಕ ವಾರ್ತೆ): ಕೋವಿಡ್-19ರ ಮೂರನೇ ಅಲೆಯು ಬೀದರ ಜಿಲ್ಲೆಗೆ ಅಪ್ಪಳಿಸದ ಹಾಗೆ ಬೀದರ ಜಿಲ್ಲಾಡಳಿತವು ಈಗಿನಿಂದಲೇ ಎಚ್ಚರಿಕೆಯ ಕ್ರಮಗಳನ್ನು ವಹಿಸುತ್ತಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ, ಬೀದರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದಕ್ಕೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬೀದರ ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ನೀಡಿದ ಸಲಹೆಯಂತೆ ಕೋವಿಡ್ ಲಸೀಕಾಕರಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಬೀದರ ಜಿಲ್ಲೆಯಲ್ಲಿ ಸಂಭವನೀಯ ಕೋವಿಡ್ ಮೂರನೇ ಅಲೆಯನ್ನು ತಡೆಯಲು ಲಸೀಕಾಕರಣವೊಂದೇ ಏಕೈಕ ಮಾರ್ಗ ಎಂಬುದನ್ನು ಎಲ್ಲ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಾರ್ಯಪವೃತ್ತರಾಗುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
3,06,303 ಜನರಿಗೆ ಕೋವಿಡ್ ಲಸಿಕೆ: ನಿಗದಿಪಡಿಸಿದ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿದಾಗಲೇ ಹೆಚ್ಚುವರಿಯಾಗಿ ಕೇಳಲು ಸಾಧ್ಯ ಎಂಬುದನ್ನು ಜಿಲ್ಲಾಧಿಕಾರಿಗಳು ಅಧಿಕಾರಿಗಳಲ್ಲಿ ಮನವರಿಕೆ ಮಾಡಿ, ಬೀದರ ಜಿಲ್ಲೆಗೆ ಇಂತಿಷ್ಟು ಮೀಸಲು ಎಂದು ನೀಡಿದ ಎಲ್ಲ ಲಸಿಕೆಯನ್ನು ಮರಳಿ ಕಳುಹಿಸದ ಹಾಗೆ, ನೀಡಿದ ಲಸಿಕೆಯನ್ನು ಕಾಲಮಿತಿಯೊಳಗೆ ಬಳಸಲು ಮುಂದಾಗಿರುವುದು ಜಿಲ್ಲಾಡಳಿತದ ಮತ್ತೊಂದು ಹೆಗ್ಗಳಿಕೆಯಾಗಿದೆ. ಮೇ.28ರವರೆಗೆ ಎಚ್‌ಸಿಡಬ್ಲು ಲಸಿಕೆ ಮೊದಲನೇ ಡೊಸ್ 13,035 ಹಾಗೂ ಎರಡನೆ ಡೋಸ್ 8-64., ಎಫ್‌ಎಲ್‌ಡಬ್ಲು ಮೊದಲನೇ ಡೋಸ್ 21,340 ಎರಡನೇ ಡೋಸ್ 8331, 16-44 ವಯೋಮಾನದವರಿಗೆ ಮೊದಲನೇ ಡೋಸ್ 10,149, 45-60 ವಯೋಮಾನದವರಿಗೆ ಮೊದಲೇ ಡೊಸ್ 1,05,539 ಎರಡನೇ ಡೋಸ್ 26,979 ಮತ್ತು 60 ವರ್ಷ ಮೇಲ್ಪಟ್ಟವರಿಗೆ 84,248 ಎರಡನೇ ಡೋಸ್ 71,992 ಸೇರಿ ಇದುವರೆಗೆ ಮೊದಲನೇ ಡೊಸ್ 2,34,311 ಹಾಗೂ ಎರಡನೇ ಡೋಸ್ 71,992 ಸೇರಿ ಒಟ್ಟು 3,06,303 ಜನರಿಗೆ ಕೋವಿಶಿಲ್ಡ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕೋವಿಡ್-19 ಪರೀಕ್ಷೆ ತೀವ್ರ: ಕೊವಿಡ್ ಸೋಂಕು ಇರುವುದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದಲ್ಲಿ ಚಿಕಿತ್ಸೆ ಫಲಾಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನ ಹರಿಸಿ, ಗುರಿನಿಗದಿಪಡಿಸಿದ ಗುರಿಯನುಸಾರ ಪ್ರತಿದಿನವೂ ಕೋವಿಡ್ ತಪಾಸಣೆ ನಡೆಯುವಂತೆ ಕ್ರಮ ವಹಿಸುತ್ತಿದ್ದಾರೆ. ಮೇ 27ರಂದು ರಾಜ್ಯದ ಬಹುತೇಕ ಜಿಲ್ಲೆಗಳಿಗಿಂತ ಅತಿ ಹೆಚ್ಚು 598 ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಮತ್ತು 2873 ಆರ್‌ಟಿಪಿಸಿಆರ್ ಟೆಸ್ಟ್ ಸೇರಿ 3537 ಪರೀಕ್ಷೆ ನಡೆಸುವ ಮೂಲಕ ಗಡಿ ಜಿಲ್ಲೆ ಬೀದರ ರಾಜ್ಯದ ಗಮನ ಸೆಳೆದಿದೆ.
ಪ್ರಕರಣಗಳು ಗಣನೀಯ ಇಳಿಮುಖ: ಎರಡನೇ ಅಲೆಯ ಆರಂಭದ ನಂತರ ಬೀದರ ಜಿಲ್ಲೆಯಲ್ಲಿ ಮೇ 29ರಂದು ಅತೀ ಕಡಿಮೆ 32 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾ ಸರ್ವೆಕ್ಷಣಾ ಘಟಕದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಮೇ 29ರಂದು ಬೀದರ ತಾಲೂಕಿನಲ್ಲಿ 605, ಬಸವಕಲ್ಯಾಣ 528, ಹುಮನಾಬಾದ್ 497, ಔರಾದ್ 523, ಭಾಲ್ಕಿನಲ್ಲಿ 417 ಮತ್ತು ಬ್ರಿಮ್ಸನಲ್ಲಿ 85 ಸೇರಿ ಒಟ್ಟು 2455 ಜನರಿಗೆ ಕೊವಿಡ್ ತಪಾಸಣೆ ನಡೆಸಿದ್ದು, ಇ ಪೈಕಿ ಕೇವಲ 32 ಜನರಿಗೆ ಕೋವಿಡ್ ಸೋಂಕು ಇರುವುದು ತಿಳಿದು ಬಂದಿದೆ.
ರಾಜ್ಯದಲ್ಲೇ ಅತೀ ಕಡಿಮೆ: ಮೇ 27ರಂದು ಬಿಡುಗಡೆ ಮಾಡಿದ ಕೋವಿಡ್ ಪಾಜಿಟಿವಿಟಿ ರೇಟ್ ವರದಿಯಲ್ಲಿ ಬೀದರ ಜಿಲ್ಲೆಯು ರಾಜ್ಯದ 30 ಜಿಲ್ಲೆಗಳ ಸಾಲಿನಲ್ಲಿ ಅತೀ ಕಡಿಮೆ ಶೇ.2.42 ಕಡಿಮೆ ಪಾಜಿಟಿವೀಟಿ ರೇಟ್ ಸಾಧನೆ ತೋರಿದೆ. ಹಾಸನ, ಕೊಲಾರ ಮತ್ತು ಶಿವಮೋಗ್ಗ ಜಿಲ್ಲೆಗಳಲ್ಲಿ ಅತೀ ಹೆಚ್ಚು ಶೇ.31.96ರಷ್ಟು ಪಾಜಿಟೀಬಿಟಿ ರೇಟ್ ಇದೆ. ಪಕ್ಕದ ಕಲಬುರಗಿ ಜಿಲ್ಲೆಯು ಮೇ.27ರಂದು ಶೇ.4.06ರಷ್ಟು ಕಡಿಮೆ ಪಾಜಿಟಿವೀಟಿ ರೇಟನೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಕೆಕೆಆರ್‌ಡಿಬಿಯಿಂದ ಬೀದರ ಜಿಲ್ಲೆಗೆ 1374.40 ಲಕ್ಷ ರೂ.: ಕೋವಿಡ್ ಎರಡನೇ ಅಲೆಯ ನಿರ್ವಹಣೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧೀ ಮಂಡಳಿಯಿAದ ಅಗತ್ಯ ನೆರವನ್ನು ಕೂಡ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೋವಿಡ್-19 ನಿರ್ವಹಣೆಗಾಗಿ 2021-22ನೇ ಸಾಲಿನ ಮ್ಯಾಕ್ರೋ ಅನುದಾನದಡಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಬೀದರ ಜಿಲ್ಲೆಗೆ 1374.40 ಲಕ್ಷ ರೂ., ಅನುದಾನ ಲಭ್ಯವಾಗಿದೆ.
ಪ್ರತಿದಿನ ಸಭೆ, ವಿಡಿಯೋ ಸಂವಾದ: ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರ ಸಮ್ಮುಖದಲ್ಲಿ ಕೊವಿಡ್ ನಿರ್ವಹನೆಗೆ ಸಂಬAಧಿಸಿದAತೆ ಸಾಕಷ್ಟು ಸಂಖ್ಯೆಯಲ್ಲಿ ಸಭೆಗಳು ಮತ್ತು ವಿಡಿಯೋ ಸಂವಾದ ನಡೆಸಿ ಬಹುತೇಕ ಸಮಯವನ್ನು ಕೊವಿಡ್ ತಡೆ ಕಾರ್ಯಾಚರಣೆಗೆ ವಿನಿಯೋಗಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್, ಸಹಾಯಕ ಆಯುಕ್ತರದ ಗರೀಮಾ ಪನ್ವಾರ, ಭುವನೇಶ ಪಾಟೀಲ, ಡಿಎಚ್‌ಓ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ, ಡಿಎಸ್‌ಓ ಡಾ.ಕೃಷ್ಣಾ ರೆಡ್ಡಿ ಸೇರಿದಂತೆ ಇನ್ನೀತರರು ಜಿಲ್ಲಾಡಳಿತದ ಕೋವಿಡ್ ತಡೆ ಕಾರ್ಯಾಚರಣೆಗೆ ಕೈಜೋಡಿಸುತ್ತಿದ್ದಾರೆ.

Latest Indian news

Popular Stories

error: Content is protected !!