ಕೋವಿಡ್ ಮೂರನೇ ಅಲೆ: ಕಾದಿದೆ ಅಪಾಯ

ನವದೆಹಲಿ: ಲಾಕ್‌ಡೌನ್ ತೆರವಾಗಿದ್ದನ್ನೆ ನೆಪವಾಗಿಟ್ಟುಕೊಂಡು ನಿರ್ಲಕ್ಷö್ಯ ತೋರಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಸ್‌ಬಿಐ ರಿಸರ್ಚ್ ವರದಿ ಎಚ್ಚರಿಸಿದೆ.
ಮುಂದಿನ ತಿಂಗಳಿನಲ್ಲಿ ಕೋವಿಡ್ ಮೂರನೇ ಅಲೆ ದೇಶಾದ್ಯಂತ ಅಪ್ಪಳಿಸುವ ಅಪಾಯ ಇದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
`ಕೋವಿಡ್-19 – ದಿ ರೇಸ್ ಟು ಫಿನಿಶಿಂಗ್ ಲೈನ್’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯು, ದೇಶಕ್ಕೆ ಆಗಸ್ಟ್ ತಿಂಗಳಲ್ಲಿ 3ನೇ ಅಲೆ ಅಪ್ಪಳಿಸಲಿದ್ದು, ಸೆಪ್ಟಂಬರ್ ನಲ್ಲಿ ಅದು ಉತ್ತುಂಗಕ್ಕೇರಲಿದೆ ಎಂದು ಹೇಳಿದೆ. ಪ್ರಸ್ತುತ ದತ್ತಾಂಶಗಳ ಪ್ರಕಾರ, ಜುಲೈ 2ನೇ ವಾರದಲ್ಲಿ ದೇಶದಲ್ಲಿ ಸುಮಾರು 10 ಸಾವಿರದಷ್ಟು ಪ್ರಕರಣಗಳು ದಾಖಲಾಗಲಿವೆ. ಆಗಸ್ಟ್ ಎರಡನೇ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರುಮುಖವಾಗಿ ಸಾಗಲಿದೆ ಎಂದು ವರದಿ ಅಂದಾಜಿಸಿದೆ.
ಈ ನಡುವೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಪನೇಸಿಯಾ ಬಯೋಟೆಕ್ ಸಂಸ್ಥೆಗೆ ಭಾರತದ ಔಷಧ ಮಹಾನಿರ್ದೇಶನಾಲಯ ಪರವಾನಿಗೆ ನೀಡಿದೆ. ಹಿಮಾಚಲ ಪ್ರದೇಶದ ಘಟಕದಲ್ಲಿ ಲಸಿಕೆ ಉತ್ಪಾದನೆಯಾಗಲಿದೆ. ಇದೇ ವೇಳೆ, 12ರಿಂದ 17ರ ವಯೋಮಾನದ ಮಕ್ಕಳ ಮೇಲೆ ಸ್ಪುಟ್ನಿಕ್ ವಿ ಪ್ರಯೋಗವು ಸೋಮವಾರದಿಂದ ಮಾಸ್ಕೋದಲ್ಲಿ ಆರಂಭವಾಗಿದೆ.

Latest Indian news

Popular Stories

error: Content is protected !!