ಮನೆಯಲ್ಲಿ ಒಬ್ಬಂಟಿ ಆಗಿದ್ದ ಕೋವಿಡ್ ಸೋಂಕಿತ ಹೃದಯಾಘಾತದಿಂದ ನಿಧನ

ಮಾದಾಪುರ ಬಳಿಯ ಕುಂಬೂರು ಗ್ರಾಮದಲ್ಲಿ ಘಟನೆ.ಪಟ್ಟಮಾಡ ದಿವಂಗತ ಮಂದಣ್ಣ ಅವರ ಮಗ ಸುಬ್ಬಯ್ಯ (67 ವರ್ಷ).
ಕೋವಿಡ್ ಸೋಂಕಿಗೆ ಒಳಗಾಗಿ ಮನೆಯಲ್ಲಿ ಸಂಪರ್ಕ ತಡೆಯಲಿದ್ದರು.

ಮೂರುದಿನಗಳಿಂದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಸಂಶಯಗೊಂಡು ನಿನ್ನೆ ರಾತ್ರಿ ಶಾಸಕ ರಂಜನ್ ಅವರಿಗೆ ಮಾಹಿತಿ ನೀಡಿದರು.

ಇಂದು ಬೆಳಗ್ಗೆ ಶಾಸಕ ಅಪ್ಪಚ್ಚುರಂಜನ್ ರವರು ಪಿ.ಪಿ.ಕಿಟ್ ಧರಿಸಿ, ಅಧಿಕಾರಿಗಳು ,ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆಗೆ ಮನೆಗೆ ತೆರಳಿ ಬಾಗಿಲು ತೆಗೆದು ನೋಡಿದಾಗ ಕುರ್ಚಿಯಲ್ಲಿ ಕುಳಿತಿದ್ದ ಸ್ಥಿತಿಯಲ್ಲಿ ಸುಬ್ಬಯ್ಯ ಮೃತದೇಹ ಪತ್ತೆಯಾಯಿತು.
ಸಾವನ್ನಪ್ಪಿ ಎಷ್ಟು ದಿನಗಳಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Latest Indian news

Popular Stories

error: Content is protected !!