ವೈದ್ಯರ ಅಥವಾ ಡಾಕ್ಟರ್ ದಿನಾಚರಣೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ವಿಭಿನ್ನ ದಿನಗಳಂದು ಆಚರಿಸುತ್ತಾರೆ

ವೈದ್ಯರ ದಿನವನ್ನಾಗಿ ಆಚರಿಸುವ ಸಂಪ್ರದಾಯ ಜುಲೈ.೧ – ೧೯೯೧ನೇ ಇಸವಿಯಿಂದ ಪ್ರಾರಂಭವಾಯಿತು. ಭಾರತದಲ್ಲಿ ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಅವರ ನೆನಪಲ್ಲಿ ಜುಲೈ. ೧ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು. ಅವರ ಗಣನೀಯ ಸೇವೆಯನ್ನು ಪರಿಗಣ ಸಿ ೧೯೬೧ರ ಫೆಬ್ರವರಿ ೪ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕುತೂಹಲಕರ ವಿಚಾರವೆಂದರೆ ಅವರು ಜನಿಸಿದ್ದು ೧೮೮೨, ಜು.೧ ತೀರಿಕೊಂಡಿದ್ದು, ೧೯೬೨ ಜುಲೈ.೧ ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಆಗಿದೆ.
ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸೇವೆಸಲ್ಲಿಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಭಾರತ ಸರ್ಕಾರ ೧೯೯೧ರಲ್ಲಿ ಜುಲೈ ೧ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟ ಹಿನ್ನೆಲೆಯಲ್ಲಿ ಪ್ರತಿವರ್ಷವು ವೈದ್ಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ವೈದ್ಯರಿಗೊಂದು ಸಲಾಂ:
ಕೊರೋನಾ ವೈರಸ್ ಮೂಲಕ ಹರಡುತ್ತಿರುವ ಕೋವಿಡ್-೧೯ ವ್ಯಾಧಿಯಿಂದ ಮನುಕುಲವನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಅಗ್ರ ಪಂಕ್ತಿಯಲ್ಲಿ ನಿಲ್ಲುವವರು ಧನ್ವಂತರಿಯ ಸ್ವರೂಪಿಗಳಾದ ನಮ್ಮ ಹೆಮ್ಮೆಯ ವೈದ್ಯರು.

ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕೋವಿಡ್-೧೯ ಪೀಡಿತ ರೋಗಿಗೆ ಚಿಕಿತ್ಸೆ ನೀಡುತ್ತಾರೆ. ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಧರಿಸುವ ಪಿ.ಪಿ.ಇ ಕಿಟ್, ಗ್ಲೌಸ್, ಗೌನ್ಸ್, ಶೂ ಕವರ್, ಹೆಡ್ ಕವರ್, ಮಾಸ್ಕ್, ಪೇಸ್ ಶೀಲ್ಡ್, ಗಾಗಲ್ಸ್ ಹಾಗೂ ರೆಸ್ಪಿರೇಟರ್ಸ ಒಳಗೊಂಡಿರುತ್ತದೆ. ಇವೆಲ್ಲವನ್ನೂ ಒಬ್ಬ ವ್ಯಕ್ತಿ ಕೇವಲ ಹತ್ತು ನಿಮಿಷ ಧರಿಸುವುದು ಕಷ್ಟ. ಆದರೆ ವೈದ್ಯರು ಒಮ್ಮೆ ಧರಿಸಿ ಆಸ್ಪತ್ರೆ ಪ್ರವೇಶಿಸಿದರೆ ಕನಿಷ್ಠ ನಾಲ್ಕು ಘಂಟೆಗಳ ಕಾಲ ಅದನ್ನು ಬದಲಾಯಿಸುವಂತಿಲ್ಲ. ಜೊತೆಗೆ ಆಹಾರ ಸೇವಿಸಲು ಹಾಗೂ ಶೌಚಾಲಯಕ್ಕೂ ಹೋಗಲು ಸಹ ಅವಕಾಶವಿರುವುದಿಲ್ಲ.
ವೈದ್ಯರಿಗೆ ಬೆವರಿನಿಂದ ಚರ್ಮದ ಮೇಲೆ ಬೊಬ್ಬೆಗಳಾಗುತ್ತವೆ ನಂತರ ಸ್ವತ: ಕ್ವಾರಂಟೀನ್‌ಗೆ ಒಳಗಾಗಬೇಕಾಗುತ್ತದೆ. ಕರ್ತವ್ಯ ಮುಗಿಸಿ ಮನೆಗೆ ಹೋದರು ಸಹ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯವರೊಂದಿಗೆ ಬೆರೆಯುವಂತಿಲ್ಲ. ಊಟದ ತಟ್ಟೆ, ಲೋಟ ಹಾಗೂ ಹಾಸಿಗೆಗಳನ್ನು ಪ್ರತ್ಯೇಕ ಕೋಣೆಯಲ್ಲಿಟ್ಟುಕೊಂಡು ಇರಬೇಕಾಗುತ್ತದೆ.
ಪ್ರೀತಿ ತುಂಬಿದ ಮಾತುಗಳಿಂದ ಅವರಲ್ಲಿ ಆಪ್ತ ಸಂಜೀವಿನಿಯAತೆ, ಸ್ನೇಹಿತನಂತೆ ಕಂಡು ಬರುತ್ತಾರೆ. ಹೀಗಾಗಿ ಇಡೀ ಸಮಾಜ ವೈದ್ಯಲೋಕವನ್ನು ಗೌರವಿಸಿ ನಮಿಸುತ್ತದೆ. ಜಾತಿ, ಪಂಥ, ಕುಲ, ಸಮುದಾಯ ನೋಡದೇ ಬಂದ ರೋಗಿಗಳನ್ನು ನಗುಮುಖದಿಂದ ಸ್ವಾಗತಿಸಿ ಆರೈಕೆ ಮಾಡಿ ಕಳುಹುಸಿಕೊಡುವ ವೈದ್ಯರು ವಿಶ್ವ ಭಾವಕೈತೆಯ ಪ್ರತೀಕವೇ ಸರಿ, ಖಾಸಗಿ ಜೀವನವನ್ನು ತೊರೆದು ಪರೋಪಕಾರ್ಥ ಇದಂ ಶರೀರಂ ಎಂದು ಭಾವದಿಂದ ಸಮರ್ಪಣಾ ಭಾವದ ಸೇವೆಗೆ ತಮ್ಮನ್ನೂ ತೊಡಗಿಸಿಕೊಳ್ಳುವವರು ಒಮ್ಮೊಮ್ಮೆ ವೈದ್ಯರು ಗೊತ್ತಾಗದೇ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಅದೆಷ್ಟೋ ಜೀವಗಳು ಕಮರಿ ಹೋಗುವ ಸಾಧ್ಯತೆ ಉಂಟು.
ಇAತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ಆಸ್ತಿ-ಪಾಸ್ತಿಯನ್ನು ಧ್ವಂಸ ಮಾಡುವುದು ಸರಿಯಲ್ಲ. ಯಾವ ವೈದ್ಯರೂ ರೋಗಿಯನ್ನು ಸಾಯಿಸಬೇಕೆಂಬ ಗುರಿ ಹೊಂದಿರುವುದಿಲ್ಲ. ಅವರ ಅಂತಿಮ ಗುರಿ ರೋಗಿಯನ್ನು ಗುಣಮುಖಗೊಳಿಸುವುದೇ ಆಗಿರುತ್ತದೆ.
ಔಷಧದ ಅಡ್ಡ ಪರಿಣಾಮಗಳಿಂದ ಅನಾಹುತ ಸಂಭವಿಸಬಹುದು, ಜನರು ಈ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು, ವೈದ್ಯರು ನಮ್ಮ ಎರಡನೇ ತಂದೆ-ತಾಯಿ ಇದ್ದಂತೆ ಅವರ ಮಾನವೀಯ ಕರ್ತವ್ಯವನ್ನು ಆರಾಧಿಸೋಣ, ಪೂಜಿಸೋಣ ಇಡೀ ದೇಶದ ಆರೋಗ್ಯವನ್ನು ಕಾಪಾಡುವ ವೈದ್ಯಲೋಕಕ್ಕೆ ಕೋಟಿ, ಕೋಟಿ ನಮನಗಳನ್ನು ಸಲ್ಲಿಸೋಣ..
ಪ್ರಸ್ತುತ ಪ್ರಪಂಚ ವ್ಯಾಪಿ ಕೊರೋನಾ ಮಹಾಮಾರಿ ವೈರಾಣು ಜನರ ನಿದ್ದೆಗೆಡೆಸಿದೆ ಎಲ್ಲರಲ್ಲೂ ಆತಂಕ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ ವೈದ್ಯರು ತಮ್ಮ ಕುಟುಂಬಸ್ಥರನ್ನು ಮರೆತು ಕೊವೀಡ್-೧೯ ಸೋಂಕಿತರ ಗುಣಮುಖಪಡಿಸಲು ಪಣತಟ್ಟು ನಿಂತಿರುವ ವೈದ್ಯರಿಗೆ ಶ್ಲಾಘನೀಯ.
ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೂ ವೈದ್ಯರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು…….

Latest Indian news

Popular Stories

error: Content is protected !!