ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪುನರ್ವಸತಿಗೆ ಕ್ರಮ: ರಾಮಚಂದ್ರನ್ ಆರ್

ಬೀದರ ಜುಲೈ 19 (ಕರ್ನಾಟಕ ವಾರ್ತೆ): ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ ಮತ್ತು ಪೋಷಣೆಗೆ ಒಳಪಡುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯನ್ನು ಜುಲೈ 17ರಂದು ರಚಿಸಲಾಯಿತು.
ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೊದ¯ನೇಯದಾಗಿ ಜುಲೈ 17ರಂದು ನಡೆದ ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯ ಸಭೆಯಲ್ಲಿ ಕಾರ್ಯಪಡೆಯ ಕರ್ತವ್ಯಗಳು ಮತ್ತು ಜಬಾಬ್ದಾರಿಗಳೇನು ಎಂಬುದರ ಬಗ್ಗೆ ಸುಧೀರ್ಘ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮಕ್ಕಳ ಸಹಾಯವಾಣಿ 1098 ಹಾಗೂ ಕೋವಿಡ್-19ರಲ್ಲಿ ಹತಾಶರಾದ ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಲು ಟೆಲಿ ಫ್ರೀ ಕೌನ್ಸೆಲಿಂಗ್ 14499 ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಕೋವಿಡ್-19ದಿಂದಾಗಿ ರಕ್ಷಣೆ ಮತ್ತು ಪೋಷಣೆಗೆ ಒಳಪಡುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಅಗತ್ಯಕ್ರಮ ವಹಿಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಕಡ್ಡಾಯವಾಗಿ ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಮತ್ತು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಟೆಲಿ ಫ್ರೀ ಕೌನ್ಸೆಲಿಂಗ್ 14499 ಸಂಖ್ಯೆಯನ್ನು ಬರೆಯಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ಕೋವಿಡ್ ಇಲ್ಲವೇ ಕೋವಿಡ್‌ಯೇತರ ಕಾರಣಗಳಿದಂಲೂ ಮರಣವಾಗಿ ಏಕಪೋಷಕತ್ವ ಹೊಂದಿದ ಮತ್ತು ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ಸರಿಯಾಗಿ ಗುರುತಿಸಿ ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಅನುಕೂಲಗಳನ್ನು ಕಲ್ಪಿಸಲು ಒತ್ತು ಕೊಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ಏಪ್ರೀಲ್ ನಿಂದ ಇಲ್ಲಿಯವರೆಗೆ 23 ಬಾಲ್ಯವಿವಾಹ ತಡೆಯಲಾಗಿದೆ ಎಂಬ ಮಾಹಿತಿ ಇದ್ದು, ಇನ್ಮುಂದೆ ಜಿಲ್ಲೆಯಲ್ಲಿ ಎಲ್ಲೂ ಬಾಲ್ಯವಿವಾಹ ಪ್ರಕರಣಗಳು ಕಂಡುಬಾರದ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ತಂದೆ ಮತ್ತು ತಾಯಿಯ ಪೈಕಿ ಒಬ್ಬರು ಕೋವಿಡ್‌ನಿಂದ ಮರಣ ಹೊಂದಿ ಏಕಪೋಷಕತ್ವ ಹೊಂದಿದ ಮಕ್ಕಳು ಜಿಲ್ಲೆಯಲ್ಲಿ 125 ಜನರಿದ್ದಾರೆ. ಕೋವಿಡ್‌ನಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಸಂಖ್ಯೆ 6 ಇದೆ. ಇವೆರಡೂ ಸೇರಿ ಒಟ್ಟು 131 ಮಕ್ಕಳಿದ್ದಾರೆ. ಕೋವಿಡ್ ಅಲ್ಲದೇ ಹೃದಯ ಕಾಯಿಲೆ, ಕಾನ್ಸರ್, ಅಫಘಾತದಂತಹ ಇತರೆ ಕಾರಣಗಳಿಂದ ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡ ಮಕ್ಕಳು 506 ಹಾಗೂ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳು 10 ಸೇರಿ ಒಟ್ಟು 516 ಮಕ್ಕಳಿದ್ದಾರೆ. 131 ಮತ್ತು 516 ಮಕ್ಕಳು ಸೇರಿ ಒಟ್ಟು 647 ಮಕ್ಕಳ ಪೈಕಿ ತಮಗೆ ರಕ್ಷಣೆ ಮತ್ತು ಪೋಷಣೆ ಬೇಕು ಎಂದು ಕೇಳಿ ಬಂದ ಮಕ್ಕಳ ಸಂಖ್ಯೆ 102 ಇದೆ. ಈ 102 ಜನ ಮಕ್ಕಳ ಮಾಹಿತಿಯನ್ನು ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ಹಾಕಲಾಗಿದೆ. ಇದರಲ್ಲಿ 71 ಮಕ್ಕಳು ಕೋವಿಡ್ ಮತ್ತು 31 ಮಕ್ಕಳು ಕೋವಿಡೇತರ ಇದ್ದಾರೆ ಎಂದು ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ರತ್ನಾಕರ್ ಅವರು ಸಭೆಗೆ ಮಾಹಿತಿ ನೀಡಿದರು.
ಸರ್ಕಾರ ರೂಪಿಸಿರುವ ಬಾಲ ಸೇವಾ ಯೋಜನೆಯಿಂದ ಅಂತಹ ಮಕ್ಕಳಿಗೆ ಸಹಾಯವಾಗಬೇಕು. ಕೋವಿಡ್‌ನಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಪ್ರತಿ ಮಾಹೆ 3000 ರೂ. ನೀಡಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಬೀದರ ಜಿಲ್ಲೆಯಲ್ಲಿ ಕೋವಿಡ್‌ನಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ 6 ಅನಾಥ ಮಕ್ಕಳಿಗೆ ಬಾಲ ಸೇವಾ ಯೋಜನೆಯ ಫಲಾನುಭವಿಗಳೆಂದು ಜುಲೈ ಮಾಹೆಯ 3000 ರೂ. ಹಾಕಲಾಗಿದೆ. ಬಾಲ ಸ್ವರಾಜ್ ಪೋರ್ಟಲ್ ಅಭಿವೃದ್ಧಿ, ಬಾಲ ಸೇವಾ ಯೋಜನೆ ಮತ್ತು ಬಾಲ ಹಿತೈಷಿ ಯೋಜನೆ ಅನುಷ್ಠಾನದಲ್ಲಿ ಬೀದರ ಜಿಲ್ಲೆಯು ಅತ್ಯುತ್ತಮ ಪ್ರಗತಿ ಸಾಧಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯ ಸಂಯೋಜಕರಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿAಗ ಹಿರೇಮಠ, ಕಾರ್ಯಪಡೆಯ ಸದಸ್ಯರಾದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬದ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮಕ್ಕಳ ರಕ್ಷಣಾಧಿಕಾರಿ ಗೌರಶಂಕರ ಪರತಾಪೂರೆ ಹಾಗೂ ಇತರರು ಇದ್ದರು.

Latest Indian news

Popular Stories

error: Content is protected !!