ಕೋವಿಡ್ ನಿಯಮಗಳನ್ನು ಅನುಸರಿಸಿ ನರೇಗಾ ಪರಿಣಾಮಕಾರಿ ಅನುಷ್ಠಾನ: ಕೋವಿಡ್‍ನ ಈ ಸಂದಿಗ್ಧ ಸಂದರ್ಭದಲ್ಲಿ ಕೊರೊನ

ಾ ಮುಂಜಾಗ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನರೇಗಾ ಕಾಮಗಾರಿಗಳನ್ನು ರಾಜ್ಯಾದ್ಯಂತ ನಿರ್ವಹಿಸಲಾಗುತ್ತಿದೆ. ಮಹಾನಗರಗಳಿಂದ ವಲಸೆ ಬಂದವರಿಗೂ ಜಾಬ್‍ಕಾರ್ಡ್ ನೀಡಿ ಕೆಲಸ ನೀಡಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲೆಡೆ ಪರಿಣಾಮಕಾರಿ ಅನುಷ್ಠಾನವಾಗುತ್ತಿದೆ ಎಂದು ಸಚಿವ ಈಶ್ವರಪ್ಪ ಅವರು ಸಭೆಗೆ ವಿವರಿಸಿದರು.
ದೇಶದಲ್ಲಿ ಒಬ್ಬ ವ್ಯಕ್ತಿ ಕೂಡ ಉಪವಾಸದಿಂದ ಇರಬಾರದು ಎನ್ನುವ ಉದ್ದೇಶದಿಂದ ಕೋವಿಡ್ ಸಮಯದಲ್ಲಿಯೂ ನರೇಗಾ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಕಳೆದ ವರ್ಷ ನಮ್ಮ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಕೇಂದ್ರ ಸರ್ಕಾರದಿಂದ 800 ಕೋಟಿ ಅಧಿಕ ಅನುದಾನವನ್ನು ರಾಜ್ಯಕ್ಕೆ ತರಲಾಗಿದೆ ಎಂದರು.
ಕೋವಿಡ್ ಮಧ್ಯೆಯೂ ಜನರಿಗೆ ಉದ್ಯೋಗ ಕೊಡುವ ಉದ್ದೇಶದಿಂದ 40 ಜನರನ್ನು ಒಳಗೊಂಡ ಗುಂಪುಗಳನ್ನು ನಿರ್ಮಾಣ ಮಾಡಿ, ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 1ಕೋಟಿ ಮಾನವ ದಿನಗಳ ಸೃಜನೆಯ ಗುರಿಯಿದ್ದು,ಜೂನ್‍ವರೆಗೆ 50ಲಕ್ಷ ಮಾನವ ದಿನ ಸೃಜನೆ ಗುರಿಗೆ ಈಗಾಗಲೇ 40.08ಲಕ್ಷ ಮಾನವ ದಿನಗಳನ್ನು ಸೃಜಿಸಿ ವಾರ್ಷಿಕ ಗುರಿಗೆ ಶೇ.40ರಷ್ಟು ಹಾಗೂ ತಿಂಗಳ ಗುರಿಗೆ ಶೇ.80ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಮ ಅನುಸರಿಸಿ 70ಸಾವಿರ ಜನರಿಗೆ ಕೆಲಸ ನೀಡಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಚಿವರ ಗಮನಕ್ಕೆ ತಂದರು.
ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 237 ಗ್ರಾಪಂಗಳಿಗೆ ರೂ.167ಲಕ್ಷ ಅನುದಾನದಡಿ ಸ್ಯಾನಿಟೈಸರ್,ಸರ್ಜಿಕಲ್ ಬಟ್ಟೆ ಮಾಸ್ಕ್, ಥರ್ಮಲ್ ಸ್ಕ್ಯಾನರ್,ಪಲ್ಸ್ ಆಕ್ಸಿಮಿಟರ್‍ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ನರೇಗಾ ಯೋಜನೆಯಡಿ 13781 ಕಾಮಗಾರಿಗಳು ಪ್ರಗತಿಯಲ್ಲಿ: ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿಯಲ್ಲಿ ಜಿಲ್ಲೆಯಲಿ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳಾದ ಸಮಗ್ರ ಕೆರೆ ಅಭಿವೃದ್ಧಿ, ನಾಲಾ ಪುನಶ್ಚೇತನ, ಕಲ್ಯಾಣಿ, ಗೋಕಟ್ಟೆ, ಮಳೆ ನೀರಿನ ಕೊಯ್ಲು, ಗ್ಯಾಬಿಯನ್ ಚೆಕ್ ಡ್ಯಾಂ, ಮಲ್ಟಿ ಆರ್ಚ್ ಚೆಕ್ ಡ್ಯಾಂ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ,ವೈಯಕ್ತಿಕ ಮತ್ತು ಸಮುದಾಯಿಕ ಸೀಕ್ ಪಿಟ್ ನಿರ್ಮಾಣ, ಜಲ ಮರುಪೂರಣ ಘಟಕ, ಅರಣೀಕರಣ, ತೋಟಗಾರಿಕೆ ಪ್ರದೇಶ ವಿಸ್ತರಣೆ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಚಿವರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ನರೇಗಾ ಯೋಜನೆಯಡಿ 13781 ಕಾಮಗಾರಿಗಳು ಪ್ರಗತಿಯಲ್ಲಿದ್ದು,ಈಗಾಗಲೇ 7369 ಕಾಮಗಾರಿಗಳು ಮುಕ್ತಾಯಗೊಂಡಿವೆ. ಸದರಿ ಕಾಮಗಾರಿಗಳಿಗೆ 39.26ಲಕ್ಷ ಮಾನವ ದಿನಗಳು ಸೃಜನೆಯಾಗಿ ರೂ.106.71ಕೋಟಿ ವೆಚ್ಚವಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿವರಿಸಿದರು.
ಸೊಂಕು ರಹಿತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ: ಜಿಲ್ಲೆಯಲ್ಲಿರುವ ಗ್ರಾಮಗಳನ್ನು ಸೊಂಕುರಹಿತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಈಶ್ವರಪ್ಪ ಅವರು ಸೂಚಿಸಿದರು.
ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಕಾರ್ಯಪಡೆ ರಚಿಸಲಾಗಿದ್ದು,ವಾರಕ್ಕೆ 3ಸಾರಿ ಸಭೆಯನ್ನು ನಡೆಸಲಾಗುತ್ತದೆ. 50 ಕುಟುಂಬಗಳನ್ನು ಸಮೀಕ್ಷೆ ಮಾಡಲು 6811 ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ಒಳಗೊಂಡ ಗ್ರಾಮ ಕುಟುಂಬ ರಕ್ಷಣಾ ಪಡೆಯನ್ನು ರಚಿಸಿ ಗ್ರಾಮೀಣ ಪ್ರದೇಶದಲ್ಲಿ ಇದುವರೆಗೆ 1043 ಗ್ರಾಮಗಳಲ್ಲಿ 386712 ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಜಿಪಂ ಸಿಇಒ ನಂದಿನಿ ಅವರು ವಿವರಿಸಿದರು.
ಸಚಿವರು ಗ್ರಾಮೀಣ ಮಟ್ಟದಲ್ಲಿ ರಚಿಸಲಾದ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ ಹಾಗೂ 14ನೇ ಹಣಕಾಸು ಯೋಜನೆ ಅಡಿ ಬಾಕಿ ಉಳಿದ ಅನುದಾನ,15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳುವುದರ ಜೊತೆಗೆ ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಪಂಗಳಿಗೆ ತಲಾ 50 ಸಾವಿರ ರೂ.ಗಳನ್ನು ಇನ್ನೂ3-4 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು;ಈ ಅನುದಾನ ಬಳಸಿಕೊಂಡು ಸೊಂಕನ್ನು ಸಂಪೂರ್ಣ ತಹಬದಿಗೆ ತನ್ನಿ ಎಂದು ಅವರು ಸೂಚಿಸಿದರು.
380 ಗ್ರಾಮಗಳಲ್ಲಿ ಯಾವುದೇ ಪ್ರಕರಣಗಳಿಲ್ಲ: ಜಿಲ್ಲೆಯಲ್ಲಿ 1043 ಗ್ರಾಮಗಳ ಪೈಕಿ 380 ಗ್ರಾಮಗಳಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. 429 ಗ್ರಾಮಗಳಲ್ಲಿ 5ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿದ್ದು,92ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಎಂದು ಜಿಪಂ ಸಿಇಒ ನಂದಿನಿ ಅವರು ಹೇಳಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

  • 3ನೇ ಅಲೆ ತಡೆಗೆ ಬಾಲಚೈತನ್ಯ ಕೇಂದ್ರಗಳು ಆರಂಭ: ಕೊರೊನಾ 3ನೇ ಅಲೆಯಿಂದ ಮಕ್ಕಳನ್ನು ಪಾರುಮಾಡಲು ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಪಂ ಜೊತೆಗೂಡಿ ಬಾಲಚೈತನ್ಯ ಹೆಸರಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಜೂ.8ರಂದು ಪ್ರಾಯೋಗಿಕವಾಗಿ ಬಳ್ಳಾರಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ 2ನೇ ಹಂತದಲ್ಲಿ ಜೂ.10ರಂದು ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹರಪ್ಪನಹಳ್ಳಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಎಲ್ಲಾ ತಾಲ್ಲೂಕುಗಳಲಿ ತಲಾ 2 ಕೇಂದ್ರಗಳಂತೆ ಜಿಲ್ಲೆಯಲ್ಲಿ ಆರೈಕೆ ಕೇಂದ್ರಗಳನ್ನು ಗುರತಿಸಲಾಗಿದೆ ಎಂದು ಜಿಪಂ ಸಿಇಒ ನಂದಿನಿ ಅವರು ಸಭೆಗೆ ವಿವರಿಸಿದರು.
    ಕೋವಿಡ್ 2ನೇ ಅಲೆ ಮತ್ತು ನಿರೀಕ್ಷಿತ 3ನೇ ಅಲೆಯ ಕಾರಣ 0 ಯಿಂದ 6 ವರ್ಷಗಳ ಮಕ್ಕಳ ಪೌಷ್ಠಿಕತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುತ್ತದೆ, ಆದ್ದರಿಂದ ತೀವ್ರ ಅಪೌಷ್ಠಿಕ ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕಮಕ್ಕಳು, ಕೋವಿಡ್-19 ಸೊಂಕಿನಿಂದಾಗಿ ಮರಣ ಹೊಂದುವ ಪ್ರಮಾಣವನ್ನು ಕಡಿಮೆಗೊಳಿಸಲು ಸದರಿ ಮಕ್ಕಳಿಗಾಗಿ ಪೂರ್ವಬಾವಿಯಾಗಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳ ವ್ಯವಸ್ಥೆ ಮಾಡಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
    ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 827 ತೀವ್ರ ಅಪೌಷ್ಠಿಕ ಮಕ್ಕಳಿದ್ದು, 45,774 ಸಾಧರಣಾ ಅಪೌಷ್ಠಿಕ ಮಕ್ಕಳನ್ನು ಗುರುತಿಸಲಾಗಿದ್ದು, ಈ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆ ಹಾಗೂ ರೋಗನಿರೋಧಕ ಹೆಚ್ಚಿಸುವ ಸಲುವಾಗಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
    ತಜ್ಞರ ಸಮಿತಿ ಸಭೆ ನಡೆಸಿ, ಅಪೌಷ್ಠಿಕ ಮಕ್ಕಳ ಸುಧಾರಣೆಗಾಗಿ ಬಾಲಚೈತನ್ಯ ಮಕ್ಕಳ ಆರೈಕೆ ಕೇಂದ್ರಕ್ಕೆ ಅವಶ್ಯವಿರುವ ಔಷಧಿಗಳು, ವೈದ್ಯಕೀಯ ಸಿಬ್ಬಂದಿಗಳು, ಚಿಕಿತ್ಸೆಗೆ ಬಳಕೆ ಮಾಡುವ ಸಾಮಾಗ್ರಿಗಳ ಪಟ್ಟಿ ತಯಾರಿಸಲಾಗಿದೆ.ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಪೂರ್ವಬಾವಿಯಾಗಿ ಪೌಷ್ಟಿಕ ಆಹಾರ ಸೇವೆ ಒದಗಿಸಲು ಎನ್.ಆರ್.ಸಿ /ಪೌಷ್ಟಿಕ ಆಹಾರ ತಜ್ಞರ ಮೂಲಕ ಮೂಲಕ ಮೆನು ಸಿದ್ದಪಡಿಸಿ ಅದರಂತೆ ಕಡ್ಡಾಯವಾಗಿ ಪಾಲಿಸಲು ನಿರ್ಧರಿಸಲಾಗಿದೆ ಎಂದರು.
    ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳಿಗೆ ಹಾಜರಾಗುವ ತಾಯಂದಿರು ಸತತವಾಗಿ 14 ದಿನಗಳು ಕೇಂದ್ರದಲ್ಲಿ ಇರುವ ಕಾರಣ ಸದರಿಯವರಿಗೆ ಸ್ತ್ರೀರೋಗ ತಜ್ಞರಿಂದ ಆರೋಗ್ಯ ತಪಾಸಣೆ, ಪ್ರತಿ ದಿನ ಆರೋಗ್ಯ ಮತ್ತು ಪೌಷ್ಟಿಕತೆಯ ನಿವ್ಹಣೆ ಬಗ್ಗೆ ಸಮಾಲೋಚನೆ, 14 ದಿನಗಳ ನಂತರ ಮಕ್ಕಳ ಆರೋಗ್ಯ ನಿರ್ವಹಣೆ ಕುರಿತು ಉಪಯುಕ್ತ ಸಲಹೆ, ತಮ್ಮ ಮ

ನೆಗಳಲ್ಲಿ ಅವರ ಅವಶ್ಯಕತೆಗೆ ತಕ್ಕಂತೆ ಪೌಷ್ಟಿಕ ಆಹಾರ ತಯಾರಿಸುವ ಬಗ್ಗೆ ಸೂಕ್ತ ಮಾಹಿತಿ ನೀಡುವಿಕೆ. ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳಿಗೆ ಹಾಜರಾಗುವ ತಾಯಂದಿರಿಗೆ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನ್ ಮತ್ತು ಮಕ್ಕಳ ಚುಚ್ಚುಮದ್ದು ಬಾಕಿಯಿದ್ದಲ್ಲಿ ಒದಗಿಸಲು ಕಡ್ಡಾಯವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಾದ್ಯಂತ ಇರುವ ತೀವ್ರ ಅಪೌಷ್ಟಿಕ ಮಕ್ಕಳಿಗೆ ವಿಶೇಷವಾದ ಗುರುತಿನ ಚೀಟಿ ವಿತರಿಸಲು ಹಾಗೂ ಸದರಿ ಮಕ್ಕಳಿಗೆ ಮುಂದುವರಿದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಆಯ್ದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಜಿಪಂ ಸಿಇಒ ನಂದಿನಿ ಅವರು ವಿವರಿಸಿದರು.
ಇದಕ್ಕೆ ಸಚಿವ ಈಶ್ವರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಸೈಯದ್ ನಾಸಿರ್ ಹುಸೇನ್, ಶಾಸಕರಾದ ಜಿ.ಕರುಣಾಕರರೆಡ್ಡಿ, ಈ.ತುಕಾರಾಂ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ, ಎಂ.ಎಸ್.ಸೋಮಲಿಂಗಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಮತ್ತು ಜಿಲ್ಲೆಯ 11 ಗ್ರಾಪಂಗಳ ಪಿಡಿಒಗಳು ಮತ್ತು ಅಧ್ಯಕ್ಷರು ಹಾಗೂ ತಾಪಂ ಇಒಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Latest Indian news

Popular Stories

error: Content is protected !!