ದೇವಾಸ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಕ್ರೂರ ರೀತಿಯ ಶಿಕ್ಷೆ ನೀಡಲಾಗಿದೆ. ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಇದ್ದಂತಹ ಸಂದರ್ಭದಲ್ಲಿ ಗುಂಪೊಂದು ಕ್ರೂರವಾಗಿ ವರ್ತಿಸಿ ಇಬ್ಬರನ್ನೂ ಶಿಕ್ಷಿಸಿದ್ದಾರೆ. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆದಿವಾಸಿಗಳ ಪ್ರಾಬಲ್ಯವಿರುವ ಉದಯನಗರದ ಬೋರ್ಪದವ್ ಗ್ರಾಮದಲ್ಲಿ ನಡೆದಿದೆ. ಜೂನ್ 24ರಂದು ಮಹಿಳೆ ಮನೆ ಬಿಟ್ಟು ಹೋಗಿ ಹೋದವಳು ವಾಪಸ್ ಬಂದಿರಲಿಲ್ಲ. ಮಹಿಳೆಯ ಪತಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮಹಿಳೆ ಕಾಣೆಯಾಗಿರುವ ಬಗ್ಗೆ ಪತಿ ಉದಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಯುವತಿ ತನ್ನ ಪ್ರಿಯಕರನಾಗಿರುವ ಹರಿ ಸಿಂಗ್ ಎಂಬ ಯುವಕನ ಮನೆಯಲ್ಲಿ ಅದೇ ಗ್ರಾಮದಲ್ಲಿಯೇ ವಾಸವಾಗಿದ್ದಾಳೆ ಎಂದು ತಿಳಿದು ಬಂದಿದೆ.
ಗ್ರಾಮದ ಜನರು ಹರಿಸಿಂಗ್ ಅವರ ಮನೆಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಪತಿ ಮತ್ತು ಗ್ರಾಮಸ್ಥರು ಮಹಿಳೆ ಹಾಗೂ ಪ್ರಿಯಕರನನ್ನು ಮನೆಯಿಂದ ಆಚೆ ತಂದು ಇಬ್ಬರನ್ನೂ ಮೊದಲು ತೀವ್ರವಾಗಿ ಥಳಿಸಲಾಯಿತು. ನಂತರ ಪತಿಯನ್ನು ಮಹಿಳೆಯ ಭುಜದ ಮೇಲೆ ಕೂರಿಸಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ್ದಾರೆ. ಇನ್ನು ಪ್ರಿಯಕರನ ಕೊರಳಿಗೆ ಪಾದರಕ್ಷೆ ಮತ್ತು ಚಪ್ಪಲಿಯನ್ನು ಧರಿಸಿ ಮೆರವಣಿಗೆ ನಡೆಸಿದ್ದಾರೆ.
ವೈರಲಾದ ವೀಡಿಯೋ ಪೊಲೀಸರಿಗೆ ತಲುಪಿದ ಕೂಡಲೇ ವಿಡಿಯೋ ಆಧರಿಸಿ ಪತಿ ಮಂಗಿಲಾಲ್ ಸೇರಿದಂತೆ 9 ಮಂದಿಯನ್ನು ಬಂಧಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚುವರಿ ಎಸ್ಪಿ ಸೂರ್ಯಕಾಂತ್ ಶರ್ಮಾ ಪ್ರಕಾರ, ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.