ಇದು ಕೇವಲ ಚುನಾವಣೆಯಲ್ಲ.ಸತ್ಯ ಮತ್ತು ಸುಳ್ಳಿನ ನಡುವಿನ ಕದನ -ಎ.ಎಸ್.ಪೊನ್ನಣ್ಣ ವ್ಯಾಖ್ಯಾನ

ಈ ಬಾರಿ ಕೊಡಗು ಮೈಸೂರು ಕ್ಷೇತ್ರದಲ್ಲಿ ಸಂಸತ್ ಸ್ಥಾನಕ್ಕೆ ನಡೆಯುವ ಚುನಾವಣೆ ಕೇವಲ ಚುನಾವಣೆಯಲ್ಲಾ.
ಬದಲಿಗೆ ಸತ್ಯ ಮತ್ತು ಸುಳ್ಳಿನ ನಡುವಿನ ಕದನವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ವ್ಯಾಖ್ಯಾನಿಸಿದ್ದಾರೆ.
ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಹತ್ತು ತಿಂಗಳಿನಲ್ಲಿ ಕ್ಷೇತ್ರದಲ್ಲಿ 250 ಕೋಟಿ ರೂಗಳ ಅಭಿವೃದ್ಧಿ ಕಾರ್ಯ ನಡೆದಿದೆ.ಇಂತಹ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರೆ ಎಂ.ಲಕ್ಷಣ್ ಅವರನ್ನು ಅತ್ಯಧಿಕ ಮತದಿಂದ ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಕೋರಿದರು.


ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ವಿಶ್ವವೇ ಬೆಚ್ಚಿ ಬೀಳುವ ಭ್ರಷ್ಟಾಚಾರ ನಡೆಸಿದ್ದು ಸಾಮಾನ್ಯರಲ್ಲಿ ಸಾಮಾನ್ಯ,
ಪ್ರಾಮಾಣಿಕರಲ್ಲಿ ಪ್ರಾಮಾಣಿಕರಾದ ಎಮ್.ಲಕ್ಷಣ್ ಅವರನ್ನು ಗೆಲ್ಲಿಸಲು ಪಣತೊಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.


ಸಮಾಜ ಕಲ್ಯಾಣ ಸಚಿವ ಡಾ ಹೆಚ್.ಸಿ.ಮಹದೇವಪ್ಪ ನವರು ಮಾತನಾಡಿ ಕೊಡಗಿನ ಜನ ಸುಸಂಸ್ಕೃತ ರು,ಸಜ್ಜನರು,
ವಿವೇಕವಂತರು ಎಂಬುದನ್ನು ತಾವು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೇ ಗಮನಿಸಿದ್ದು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಮತ್ತು ಸಂವಿಧಾನವನ್ನು ಪಾಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕರೆ ನೀಡಿದರು.
ಎಂ.ಲಕ್ಷಣ್ ಅವರನ್ನು ಗೆಲ್ಲಿಸುವ ಮೂಲಕ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಅವರ ಕೈ ಬಲಪಡಿಸಲು ಕೋರಿದರು.


ಪಶುಸಂಗೋಪನ ಇಲಾಖೆ ಸಚಿವ ಕೆ.ವೆಂಕಟೇಶ್ ಮಾತನಾಡಿ ಎ.ಎಸ್.ಪೊನ್ನಣ್ಣ ಅವರು ರಾಜ್ಯದಲ್ಲಿಯೇ ಪ್ರಭಾವಿ ವ್ಯಕ್ತಿಯಾಗಿದ್ದು ಅವರ ಮಾತನ್ನು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೇಳುವ ಮಟ್ಟಿಗೆ ಅವರ ಪ್ರಭಾವ ಇದೆ. ಹಾಗಾಗಿ ಪೊನ್ನಣ್ಣ ನವರ ಗೌರವವನ್ನು ಹೆಚ್ಚಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಎಂ.ಲಕ್ಷಣ್ ಅವರಿಗೆ ಮತ ನೀಡುವಂತೆ ಕೋರಿದರು.


ಅಭ್ಯರ್ಥಿ ಎಂ.ಲಕ್ಷಣ್ ಗೌಡ ಮಾತನಾಡಿ ಕೊಡಗಿನ ಜ್ವಲಂತ ಸಮಸ್ಯೆಗಳು ,ಅವುಗಳಿಗೆ ಕೇಂದ್ರದಿಂದ ಬರಬೇಕಾದ ನೆರವುಗಳ ಅರಿವಿದ್ದು ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಅವರ ಸಲಹೆ ಸೂಚನೆಗಳನ್ನು ಆಧರಿಸಿ ನಡೆಯಲಿದ್ದೇನೆ ಎಂದು ಭರವಸೆ ನೀಡಿದರು.ಕೊಡವ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದ ದಲ್ಲಿ ಸೇರ್ಪಡೆಗೊಳಿಸಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ
.ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ,ಅರುಣ್ ಮಾಚಯ್ಯ,
ಪ್ರಮುಖರಾದ ಡಾ ಸುಶ್ರುತ ಗೌಡ,ತೆನ್ನಿರ ಮೈನಾ, ಹೊಸೂರು ಸೂರಜ್,ಹೆಚ್.ಎ.ಹಂಸ,ಅಣ್ಣಯ್ಯ,ಕೆ.ಎ.ಯಾಕುಬ್,ಹನೀಫ್ ,ಮಾದಂಡ ತಿಮ್ಮಯ್ಯ,ಜಾನ್ಸನ್,ಶಶಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಕೊಡವ ಭಾಷಾ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಹಾಗೂ ಅನೇಕ ಜನರು ಪಕ್ಷಕ್ಕೆ ಸೇರ್ಪಡೆಯಾದರು.

Latest Indian news

Popular Stories