ಕಾಸರಗೋಡು, ಜ.2: ಡ್ರಗ್ಸ್ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಮಂಜೇಶ್ವರ ಪೊಲೀಸರು ಐವರನ್ನು ಬಂಧಿಸಿದ್ದು, ಅವರ ಬಳಿಯಿದ್ದ 55 ಗ್ರಾಂ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಿವಾಸಿ ಬಶೀರ್ (27), ಕನ್ಯಾನ ಮಡಕುಂಜ ನಿವಾಸಿ ಕಲಂದರ್ ಶಾಫಿ (29), ತಲಪಾಡಿ ನಿವಾಸಿ ಪ್ರೀತಂ (29), ಕಿರಣ್ ಡಿಸೋಜಾ (30) ಮತ್ತು ಕೋಟೆಕಾರ್ ನಿವಾಸಿ ಅಕ್ಷಯ್ (24) ಬಂಧಿತರು. ಇವರಿಂದ ಒಂದು ಸ್ಕೂಟರ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಕಣ್ವತೀರ್ಥ ತೂಮಿನಾಡು ಎಂಬಲ್ಲಿ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದಾಗ ಬಶೀರ್ ಮತ್ತು ಕಲಂದರ್ ಪ್ರಯಾಣಿಸುತ್ತಿದ್ದ ಸ್ಕೂಟರ್‌ನಲ್ಲಿ 43 ಗ್ರಾಂ ಮಾದಕ ವಸ್ತು ಪತ್ತೆಯಾಗಿದೆ.
ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆಗಾಗಿ ಪೊಲೀಸರು ಸ್ಕೂಟರ್ ಅನ್ನು ನಿಲ್ಲಿಸಿದಾಗ ಇನ್ನೂ 12 ಗ್ರಾಂ ಮಾದಕವಸ್ತು ಪತ್ತೆಯಾಗಿದೆ ಮತ್ತು ಅವರಲ್ಲಿ ಮೂವರನ್ನು ಬಂಧಿಸಲಾಯಿತು.