ಮಣಿಪಾಲ, ಜ.23: ಏಳು ವರ್ಷಗಳ ಹಿಂದೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಉತ್ತರಾಖಂಡ ರಾಜ್ಯದ ಬನ್‌ಬಸಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಕೋಟ್ ಎಂಬಲ್ಲಿ ಜ.20ರಂದು ಬಂಧಿಸಿದ್ದಾರೆ.
ಬಂಧಿತನನ್ನು ನೇಪಾಳ ದೇಶದ ಜಿತೇಂದ್ರ ಶಾರ್ಕಿ(26) ಎಂದು ಗುರುತಿಸ ಲಾಗಿದೆ. 2015ರಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೋಕ್ಸೊ ಪ್ರಕರಣಕ್ಕೆ ಈತ ಆರೋಪಿಯಾಗಿದ್ದನು.
ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ದ ನ್ಯಾಯಾಲಯವು ಸುಮಾರು 16 ಬಾರಿ ವಾರಂಟ್ ಹಾಗೂ ಮೂರು ಬಾರಿ ಅಟ್ಯಾಚ್‌ಮೆಂಟ್ ವಾರೆಂಟ್ ಹೊರಡಿಸಿತ್ತು. ಈತನನ್ನು ಪತ್ತೆ ಹಚ್ಚಲು ರಚಿಸಲಾದ ವಿಶೇಷ ತಂಡವು ಸತತ ಒಂದು ವಾರಗಳ ಕಾಲ ಭಾರತ- ನೇಪಾಳ ಗಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದೆ. ಜ.22ರಂದು ವಾರೆಂಟ್ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ