ಕಾರು – ಟ್ರಕ್‌ ಅಪಘಾತ: ಐಎಎಸ್‌ ದಂಪತಿ ಸೇರಿ ಏಳು ಮಂದಿಗೆ ಗಾಯ; ಓರ್ವ ಗಂಭೀರ

ತಿರುವನಂತಪುರಂ: ಕೇರಳ ಗೃಹ ಕಾರ್ಯದರ್ಶಿ ಡಾ.ವಿ.ವೇಣು ದಂಪತಿ ಹಾಗೂ ಕುಟುಂಬ ಸಂಚಾರಿಸುತ್ತಿದ್ದ ಕಾರು ಟ್ರಕ್‌ ಗೆ ಢಿಕ್ಕಿಯಾಗಿ ಗಾಯಗಳಾದ ಘಟನೆ ಆಲಪ್ಪುಳ ಜಿಲ್ಲೆಯ ಕೊಟ್ಟುಕುಲಂಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ಜ.9 ರಂದು) ಮುಂಜಾನೆ ನಡೆದಿದೆ.

ಐಎಎಸ್‌ ದಂಪತಿ ಡಾ.ವೇಣು, ಶಾರದ ಮುರಳೀಧರನ್ ಮಗ ಶಬರಿ, ಚಾಲಕ ಅಭಿಲಾಶ್ ಹಾಗೂ ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿವೆ.

ವೇಣು ಕುಟುಂಬ ಕಾರಿನಲ್ಲಿ ಕೊಚ್ಚಿಯಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು. ಟ್ರಕ್ ಎರ್ನಾಕುಲಂ ಕಡೆಗೆ ಹೋಗುತ್ತಿತ್ತು. ಟ್ರಕ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಏಟಾಗಿದೆ.

ಘಟನೆಯಲ್ಲಿ ವೇಣು ಅವರ ಮೂಗು, ಹಣೆ ಮತ್ತು ಮೂತ್ರಕೋಶದ ಮೇಲೆ ಗಾಯಗಳಾಗಿವೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷದ ಜೂನ್‌ ನಲ್ಲಿ ವೇಣು ರಾಜ್ಯ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

Latest Indian news

Popular Stories