ಕಾರ್ಕಳ: ಮನೆ ಬಾಗಿಲು ಒಡೆದು ಆರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

ಕಾರ್ಕಳ: ಜಾತ್ರೆಯಲ್ಲಿ ವ್ಯಾಪಾರ ಮಾಡಲು ಹೋಗಿದ್ದ ಸಂದರ್ಭದಲ್ಲಿ ಆರು‌ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.

ಕಮುಹಮ್ಮದ್ ಇರ್ಫಾನ್ ಎಂಬುವವರು ಶುಕ್ರವಾರ ಬೆಳಿಗ್ಗೆ ಕಡ್ತಲ ಎಂಬಲ್ಲಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಹೋಗಿದ್ದು , ಅವರ  ಹೆಂಡತಿ ದಿನಾಂಕ 04/02/2023 ರಂದು ಬೆಳಿಗ್ಗೆ 08:00 ಗಂಟೆಗೆ ಬೈಲೂರು ಎಂಬಲ್ಲಿರುವ  ಅವರ ತಾಯಿ ಮನೆಗೆ  ಹೋಗಿದ್ದು ಆ ಸಮಯದಲ್ಲಿ ಯಾರೋ ಕಳ್ಳರು ಮನೆಯ  ಮುಂದಿನ ಬಾಗಿಲನ್ನು ಯಾವುದೋ ಸಾಧನದಿಂದ ಬಲಪ್ರಯೋಗಿಸಿ ಮುರಿದು ಒಳಪ್ರವೇಶಿಸಿ ಒಳಗೆ ಬೆಡ್‌ರೂಮಿನಲ್ಲಿದ್ದ ಸ್ಟೀಲ್‌ನ  ಕಾಣಿಕೆ  ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ ನಗದು  ರೂಪಾಯಿ 4000/-  ಹಾಗೂ  ಇನ್ನೊಂದು ಬೆಡ್ ರೂಮಿನ ಒಳಗೆ  ಅಲ್ಮೆರಾದ ಲಾಕರ್‌ನ  ಬೀಗವನ್ನು ಮುರಿದು ಒಳಗೆ ಇದ್ದ (1) 5 ಪವನ್‌ನ ಚಿನ್ನದ ಕರಿಮಣಿ ಸರ-1, (2) 6 ಪವನ್ ತೂಕದ ಚಿನ್ನದ ಗಿಡ್ಡ ನೆ್ಕಲೆಸ್-1,(3) 2 ಪವನ್ ತೂಕದ ಚಿನ್ನದ ಬಳೆ-2,(4) 4ಪವನ್ ತೂಕದ ಚಿನ್ನದ ಬ್ರಾಸ್‌ಲೆಟ್-1,(5) 5 ಪವನ್  ತೂಕದ ಚಿನ್ನದ ಉದ್ದ ನೆಕ್‌ಲೆಸ್-1,(6) 1 ಪವನ್ ತೂಕದ ಮಗುವಿನ ಚಿನ್ನದ ಚೈನ್-1 , (7) 1ಪವನ್ ತೂಕದ  ಮಗುವಿನ ಚಿನ್ನದ ಕರಿಮಣಿ ಬಳೆಗಳು-2,(8) 1 ಪವನ್ ತೂಕದ  ಚಿನ್ನದ  ಉಂಗುರ-3, (9) 1 ಪವನ್ ತೂಕದ ಮಗುವಿನ ಚಿನ್ನದ ಬ್ರಾಸ್‌ಲೆಟ್-1, ಇವುಗಳನ್ನು ಕಳವು ಮಾಡಿಕೊಂಡು  ಹೋಗಿದ್ದು ಕಳವಾದ ಚಿನ್ನಾಭರಗಳ ಒಟ್ಟು ಮೌಲ್ಯ ನಗದು ಸೇರಿ ರೂಪಾಯಿ 6,28,000/ ಆಗಿರುತ್ತದೆ .

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Latest Indian news

Popular Stories