ಕೊಟ್ಟೂರಿನ ಗುರುಬಸವೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಮದಲಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಗಳ ಕಾರ್ತಿಕೋತ್ಸವ(ರಥೋತ್ಸವ) ನಿಷೇಧ

ಬಳ್ಳಾರಿ,ಡಿ.24:- SಂಖS-ಅoಗಿ2 ಎಂಬ ಹೊಸ ವೈರಾಣುವಿನ ಸೋಂಕು ರಾಜ್ಯದಲ್ಲಿ ಹರಡುವಿಕೆಯನ್ನು ತಡೆಗಟ್ಟುವುದು ಅವಶ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವ ಸಾಧ್ಯತೆ ಇರುವುದರಿಂದ ಕೊಟ್ಟೂರಿನ ಗುರುಬಸವೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಮದಲಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಗಳ ಕಾರ್ತಿಕೋತ್ಸವ(ರಥೋತ್ಸವ) ಕಾರ್ಯಕ್ರಮಗಳನ್ನು ಹಾಗೂ ಏಕ ಕಾಲದಲ್ಲಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಿ ಜಿಲ್ಲಾದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಡಿ.28ರಂದು ನಡೆಯಲಿದ್ದ ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಕಾರ್ತೀಕೋತ್ಸವ(ಬೆಳ್ಳಿ ರಥೋತ್ಸವ),2021ರ ಜನೆವರಿ 2 ಮತ್ತು 3ರಂದು ನಡೆಯಲಿದ್ದ ಮದಲಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಗಳ ಕಾರ್ತಿಕೋತ್ಸವ(ರಥೋತ್ಸವ)ವನ್ನು ನಿಷೇಧಿಸಲಾಗಿದೆ ಮತ್ತು ಏಕಕಾಲದಲ್ಲಿ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.
ಆದರೆ, ದೇವಸ್ಥಾನದಲ್ಲಿ ಧಾರ್ಮಿಕ ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ನೇರವೆರಿಸಬಹುದಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories