ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದಿಂದ ಕವನ ಸ್ಪರ್ಧೆ

ಮಡಿಕೇರಿ ಡಿ. 8 : ಮಡಿಕೇರಿಯ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕೊಡಗು ಜಿಲ್ಲೆಯ ಕವಿ ಮನಸ್ಸುಗಳಿಗಾಗಿ ವಾಟ್ಸ್ ಅಪ್ ಮೂಲಕ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಚಳಿಗಾಲದ ಅನುಭವ” ದ ಬಗ್ಗೆ ಕವನ ರಚಿಸಬೇಕಾಗಿದ್ದು, ಕವನಗಳು ಹದಿನಾರರಿಂದ ಇಪ್ಪತ್ತನಾಲ್ಕು ಸಾಲುಗಳ ಮಿತಿಯಲ್ಲಿ ಕನ್ನಡ ಭಾಷೆಯಲ್ಲಿರಬೇಕು. ಕವನವು ರಾಜಕೀಯ ಹಾಗೂ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗಬಾರದು. ಅಲ್ಲದೆ ಈಗಾಗಲೇ ಪ್ರಕಟವಾಗಿರಬಾರದು, ಸ್ವಂತ ರಚನೆಯಾಗಿರಬೇಕು. ಡಿ. 19 ರಂದು ಸಂಜೆ 10 ಹತ್ತು ಗಂಟೆಯೊಳಗೆ ಕಳುಹಿಸಿಕೊಡುವಂತೆ ತಿಳಿಸಿದರು.
ಕವನಗಳನ್ನು ಮೊಬೈಲ್‍ನಲ್ಲಿ ಟೈಪ್ ಮಾಡಿ ಎಂ.ಪಿ.ಕೇಶವ ಕಾಮತ್, ಅಧ್ಯಕ್ಷ,ಕೊಡಗು ಲೇಖಕರ ಹಾಗೂ ಕಲಾವಿದರ ಬಳಗ, ಮಡಿಕೇರಿ ಇವರ ಮೊಬೈಲ್ ಸಂಖ್ಯೆ 94483 46276 ಗೆ ವಾಟ್ಸ್ ಅಪ್ ಮೂಲಕ ಕಳುಹಿಸಬೇಕು. ಫೆÇಟೋ, ಕೈಬರೆಹಗಳನ್ನು ಸ್ವೀಕರಿಸುವುದಿಲ್ಲ.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕವನಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ನೀಡಲಾಗುವುದು. ಅಲ್ಲದೇ ಮೆಚ್ಚಿಗೆಯ ಹತ್ತು ಕವನಗಳಿಗೂ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿ ಮನಸ್ಸುಗಳಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಕವನಗಳಲ್ಲಿ ಆಯ್ದ ಕವನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು ಹಾಗೂ ಪುಸ್ತಕದ ಪ್ರತಿಯನ್ನು ಕವನ ರಚಿಸಿದ ಕವಿಗಳಿಗೆ ಉಚಿತವಾಗಿ ನೀಡಲಾಗವುದು ಎಂದು ವಿಲ್ಫ್ರಡ್ ಕ್ರಾಸ್ತಾ ತಿಳಿಸಿದ್ದಾರೆ.

Latest Indian news

Popular Stories