ಕೊಡಗು: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ

ಮಡಿಕೇರಿ ಡಿ.3 : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೊಡಗು ಸಿರಿಗನ್ನಡ ವೇದಿಕೆ ವತಿಯಿಂದ ನಡೆದÀ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರ ಹೆಸರುಗಳನ್ನು ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಪ್ರಕಟಿಸಿದ್ದಾರೆ.
ಮಮತ ಪ್ರಥಮ, ಮಂಗಳೂರು ವಿವಿ ಕಾಲೇಜಿನ ಗಿರೀಶ್ ಪಿ.ಎಂ. ದ್ವಿತೀಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಶೋಭಿತ ಅನ್ವೇಕರ್ ಮತ್ತು ವೀಣಾ ವರ್ಣೇಕರ್ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಠಲ್, ಸಿರಿಗನ್ನಡ ವೇದಿಕೆ ವತಿಯಿಂದ ರಾಜ್ಯ ಮಟ್ಟ ಸೇರಿದಂತೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ವಿವಿಧ ವಿಭಾಗಗಳಲ್ಲಿ ನಡೆಸಲಾಗಿದೆ ಎಂದರು. ಕಳೆದ ಮೂರು ವರುಷಗಳಿಂದ ಸಿರಿಗನ್ನಡ ವೇದಿಕೆ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದೀಗ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ‘ದ್ರಾವಿಡ ಕನ್ನಡ ಪೂರ್ವೋತ್ತರಗಳು’ ವಿಷಯದಡಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ನಡೆಯಿತು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ‘ದ್ರಾವಿಡ ಕನ್ನಡ ಪೂರ್ವ ಇತಿಹಾಸ’ ವಿಷಯದಡಿ ನಡೆದ ಸ್ಪರ್ಧೆಯಲ್ಲಿ ಕೂಡಿಗೆಯ ಜಿ.ಎಸ್.ತೀರ್ಥಕುಮಾರ್ ಪ್ರಥಮ, ಎಂ.ಜಿ.ಗೌರಮ್ಮ ದ್ವಿತೀಯ, ಮಾಳೆಯಂಡ ನೀಮಾ ಕಾರ್ಯಪ್ಪ ಮತ್ತು ಕುಕ್ಕನೂರು ರೇಷ್ಮಾ ಮನೋಜ್ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಶಾಲಾ ವಿಭಾಗದಲ್ಲಿ `ಕವಿ ಕಂಡ ಕನ್ನಡ ನಾಡು’ ವಿಷಯದಡಿ ನಡೆದ ಸ್ಪರ್ಧೆಯಲ್ಲಿ ಪಿ. ತ್ರಿವೇಣಿ ಮತ್ತು ಸಾನಿಯಾ ಯು. ಪ್ರಥಮ, ವಿಶ್ರುತ ಮತ್ತು ಮಂಜುನಾಥ ಎಂ. ಬೋವಿ ದ್ವಿತೀಯ, ಸಿ. ಎಸ್. ಶಶಾಂಕ್ ಮತ್ತು ಕೊಂಬಂಡ ತನ್ಮಯ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜು ವಿಭಾಗದಲ್ಲಿ ‘ಕವಿ ಕಂಡ ಕನ್ನಡ ನಾಡು’ ವಿಷಯದಡಿ ನಡೆದ ಸ್ಪರ್ಧೆಯಲ್ಲಿ ಗೋಕಾಕ ಕಾಲೇಜಿನ ಸುಜಾತ ಭೀಮಪ್ಪ ಮತ್ತು ಸೌಮ್ಯ ಶಂಕ್ರಪ್ಪ ಬಂಡಿ ಪ್ರಥಮ, ಅಶ್ವಿನಿ ಎಂ. ಬೋವಿ ದ್ವೀತಿಯ, ಬಿ. ಎಸ್. ಮಂಜುನಾಥಾಚಾರಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಬಹುಮಾನ ವಿಜೇತರಿಗೆ ದಾನಿಗಳಾದ ಮಡಿಕೇರಿಯ ಅರುಣ ಸ್ಟೋರ್ಸ್ ಮತ್ತು ಕಸಾಪ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಅವರ ಸಹಕಾರದೊಂದಿಗೆ ಶಾಲಾ ಕಾಲೇಜು ವಿಭಾಗದ ವಿಜೇತರಿಗೆ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರದೊಂದಿಗೆ ಪುಸ್ತಕವನ್ನು ಉಡುಗೊರೆಯಾಗಿ ಅಂಚೆಯ ಮೂಲಕ ನೀಡಲಾಗುವುದು. ರಾಜ್ಯಮಟ್ಟದ ವಿಜೇತರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ, ಮೈಸೂರಿನ ಲಡಾಯಿ ಪ್ರಕಾಶನದ ಪುಸ್ತPಗಳನ್ನು ಸಿರಿಗನ್ನಡ ವೇದಿಕೆಯ ವತಿಯಿಂದ ಬಹುಮಾನವಾಗಿ ನೀಡಲಾಗುವುದು ಎಂದು ವಿಠಲ್ ಮಾಹಿತಿ ನೀಡಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಬಾರುಕೋಲು ಪತ್ರಿಕೆಯ ಸಂಪಾದಕ ರಂಗ ಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅವಿನಾಶ್, ಸಾಹಿತಿ ಹರೀಶ್ ಸರಳಾಯ ಕಾರ್ಯನಿರ್ವಹಿಸಿದ್ದಾರೆ ಎಂದರು.
ವೇದಿಕೆಯ ಪ್ರಮುಖರಾದ ಡಾ.ಜೆ.ಸೋಮಣ್ಣ ಮಾತನಾಡಿ, ಸಾಹಿತ್ಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಕೊಡಗು ಸಿರಿಗನ್ನಡ ವೇದಿಕೆ ನಡೆಸುತ್ತ ಬಂದಿದೆ. ಅಲ್ಲದೆ ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ ಭಾಷಾ ಸಂಸ್ಕøತಿಯ ಬೆಳವಣಿಗೆಗೆ ಹಲವು ಸಾಹಿತ್ಯಪರ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ಸಾಹಿತ್ಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಕಾಳೇಗೌಡ ನಾಗವಾರ ಹಾಗೂ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.

Latest Indian news

Popular Stories