ಸಾಗರ್ (ಮಧ್ಯಪ್ರದೇಶ): ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶದ ನಡುವೆಯೇ ಅಮಾನತುಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ಮಂಗಳವಾರ ಸಾಗರದಲ್ಲಿ ನೆಲಸಮಗೊಳಿಸಿದೆ.
ಡಿಸೆಂಬರ್ 22 ರಂದು ಜಗದೀಶ್ ಯಾದವ್ ಎಂಬುವರ ಮೇಲೆ ಎಸ್‌ಯುವಿ ಚಲಾಯಿಸಿ ಹತ್ಯೆಗೈದ ಆರೋಪ ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಮೇಲಿತ್ತು.
ಇಂದೋರ್‌ನ ವಿಶೇಷ ತಂಡ ಮಂಗಳವಾರ ಸಂಜೆ 60 ಡೈನಮೈಟ್‌ಗಳನ್ನು ಸ್ಫೋಟಿಸಿ ಹೊಟೇಲ್ ಅನ್ನು ಕೆಡವಿತು. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ನೆಲಸಮ ಸಂದರ್ಭದಲ್ಲಿ ಹಾಜರಿದ್ದರು.
ಮಿಶ್ರಿ ಚಂದ್ ಗುಪ್ತಾ ಅವರ ಹೋಟೆಲ್ ಜೈರಾಮ್ ಪ್ಯಾಲೇಸ್ ಸಾಗರ್‌ನ ಮಕರೋನಿಯಾ ಛೇದನದ ಬಳಿ ಇದೆ. ಸುರಕ್ಷತಾ ದೃಷ್ಟಿಯಿಂದ, ಛೇದನದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಸಂಚಾರ ಸ್ಥಗಿತ, ಹೋಟೆಲ್ ಸುತ್ತಮುತ್ತಲಿನ ಕಟ್ಟಡಗಳಲ್ಲಿ ವಾಸಿಸುವ ಜನರು ಸುರಕ್ಷತವಾಗಿ ಹೊರ ಬಂದ ನಂತ್ರ, ಹೋಟೆಲ್‌ಅನ್ನು ನೆಲಸಮಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ದೀಪಕ್ ಆರ್ಯ ಹೇಳಿದರು.
ಕೋರೆಗಾಂವ್ ನಿವಾಸಿ ಜಗದೀಶ್ ಯಾದವ್ ಸ್ವತಂತ್ರ ಕೌನ್ಸಿಲರ್ ಕಿರಣ್ ಯಾದವ್ ಅವರ ಸೋದರಳಿಯ. ಡಿಸೆಂಬರ್ 22 ರಂದು ಎಸ್‌ಯುವಿಗೆ ಬಲಿಯಾಗಿದ್ದರು. ಈ ಸಂಬಂಧ ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ.
ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಕಿರಣ್ ಯಾದವ್ ಮಿಶ್ರಿ ಚಂದ್ ಗುಪ್ತಾ ಅವರ ಪತ್ನಿ ಮೀನಾ ಅವರನ್ನು 83 ಮತಗಳಿಂದ ಸೋಲಿಸಿದರು. ಈ ವೈಷಮ್ಯದಲ್ಲಿ ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.