ನವದೆಹಲಿ, ಜ 3 (ಯುಎನ್‍ಐ):- ಕೋವಿಡ್ -19 ಲಸಿಕೆಗಳ ತುರ್ತು ಬಳಕೆಯ ಅನುಮತಿ ನೀಡುವ ಭಾರತದ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ ಎಂದು ಸಂಸ್ಥೆಯ ಆಗ್ನೇಯ ಏμÁ್ಯ. ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ನೀಡಿರುವ ಅನುಮೋದನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸುತ್ತದೆ. ಭಾರತದ ಈ ನಿರ್ಧಾರ ಪ್ರಶಂಸನೀಯ. ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಬಲಪಡಿಸಲು ಈ ನಿರ್ಧಾರ ಸಹಾಯ ಮಾಡುತ್ತದೆ ಎಂದು ಡಾ ಸಿಂಗ್ ಹೇಳಿದ್ದಾರೆ.
ಆದ್ಯತೆಯ ಜನಸಂಖ್ಯೆಯಲ್ಲಿ ಲಸಿಕೆಯ ಬಳಕೆ, ಇತರ ಸಾರ್ವಜನಿಕ ಆರೋಗ್ಯ ಕ್ರಮಗಳ ನಿರಂತರ ಅನುಷ್ಠಾನ ಮತ್ತು ಸಮುದಾಯದ ಸಹಭಾಗಿತ್ವವು ಕೋವಿಡ್-19 ನ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತ್ ಬಯೋಟೆಕ್‍ನ ದೇಶೀಯವಾಗಿ ತಯಾರಿಸಿದ ಕರೋನಾ ಲಸಿಕೆ ‘ಕೊವಾಕ್ಸಿನ್’ ಮತ್ತು ಪುಣೆಯ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕರು ಭಾನುವಾರ ಅನುಮೋದನೆ ನೀಡಿದ್ದಾರೆ.