ಗೋಸಾಗಾಟ ಪ್ರಕರಣ: ಇಬ್ಬರ ಬಂಧನ

ಮಂಗಳೂರು, ಮಾ.7: ಅಂತರರಾಜ್ಯದ ದನ ಕಳ್ಳತನದ ಆರೋಪಿಗಳನ್ನು ಬಜ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪೂವಪ್ಪ ಮತ್ತು ಸಿಬ್ಬಂದಿಗಳು ಮಾರ್ಚ್ 6 ರಂದು ಬೆಳಗ್ಗೆ ಅಡ್ಡೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವಾಸಿ ಇರ್ಷಾದ್ (32) ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಇರ್ಫಾನ್ ಅಲಿಯಾಸ್ ಮಲಾರ್ ಇರ್ಫಾನ್ (29) ಎಂದು ಗುರುತಿಸಲಾಗಿದೆ. ಮಡಡ್ಕ ಫಾರೂಕ್ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ

ಹಸುಗಳನ್ನು ಸಾಗಿಸುವ ಸಂದರ್ಭದಲ್ಲಿ ಆರೋಪಿಗಳು ಬಳಸುತ್ತಿದ್ದ ಕಾರು ಹಾಗೂ ಇತರೆ ಪರಿಕರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಬಜ್ಪೆ, ಕೊಣಾಜೆ, ಕಾವೂರು, ಮೂಡುಬಿದಿರೆ, ಮಂಗಳೂರು ಉತ್ತರ, ಪುಂಜಾಲಕಟ್ಟೆ, ಬಂಟ್ವಾಳ ನಗರ, ಬಣಕಲ್, ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಗೋವು ಕಳ್ಳತನ ಮತ್ತು ಲೂಟಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ.

ಕಾರ್ಯಾಚರಣೆಯಲ್ಲಿ ಎಸ್ ಐ ಪೂವಪ್ಪ, ಗುರುಕಾಂತಿ, ಎಎಸ್ ಐ ರಾಮಣ್ಣ ಪೂಜಾರಿ, ಸುಜನ್, ರಶೀದಾ ಶೇಖ್, ರಾಜೇಶ್, ಸಂತೋಷ, ಸಂಜೀವ ಬಜಂತ್ರಿ, ಬಸವರಾಜ ಪಾಟೀಲ್, ಮೋಹನ್, ಉಮೇಶ, ಕೆಂಚಪ್ಪ ಭಾಗವಹಿಸಿದ್ದರು.

Latest Indian news

Popular Stories