ಚನ್ನಪಟ್ಟಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು

ರಾಮನಗರ: ಚನ್ನಪಟ್ಟಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. 

ಅಪಘಾತದಲ್ಲಿ ವಿನಯ್ ಮತ್ತು ಮಂಜೇಶ್ ಎಂಬುವರು ಸಾವನ್ನಪ್ಪಿದ್ದು ವಿಜಯ್ ಮತ್ತು ನಿಖಿಲ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂಭವಿಸುವುದಕ್ಕೂ ಕೆಲ‌ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್ ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ವಿನಯ್, ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸ‌ ನಿಮ್ಮಿತ್ತ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Latest Indian news

Popular Stories