ಜೊ ಬೈಡನ್ ಭಾಷಣ ಸಿದ್ದಪಡಿಸಿದ್ದು ಯಾರು ಗೊತ್ತೆ ?

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಪದಗ್ರಹಣ ಮಾಡಿದ ನಂತರ ಮಾಡಲಿರುವ ಭಾಷಣವನ್ನು ಸಿದ್ಧಪಡಿಸಿದವರು ಯಾರು ಗೊತ್ತೆ ?
ಭಾರತೀಯ ಮೂಲದ ವಿನಯರೆಡ್ಡಿ !. ಓಹಿಯೊದ ಡೇಟನ್‍ನಲ್ಲಿ ಬೆಳೆದಿರುವ ವಿನಯರೆಡ್ಡಿ ಅವರು 2013 ರಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದಾಗಲೂ ವಿನಯರೆಡ್ಡಿ ಸಿದ್ಧಪಡಿಸಿದ್ದ ಭಾಷಣವನ್ನೇ ಓದಿದ್ದರು.
ಕಳೆದ ನವೆಂಬರ್‍ನಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡಾಗಲೇ ಜೊ ಬೈಡನ್ ಅವರು ವಿನಯ್ ರೆಡ್ಡಿಗೆ ಭಾಷಣ ಸಿದ್ದಪಡಿಸಲು ಹೇಳಿದ್ದರಂತೆ. ಅದರಂತೆ ವಿನಯರೆಡ್ಡಿ ಭಾಷಣವನ್ನು ಸಿದ್ದಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷರಿಗೆ ಭಾಷಣ ಪ್ರತಿಯನ್ನು ಬರೆದುಕೊಡುತ್ತಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ವಿನಯ್ ರೆಡ್ಡಿ ಎನ್ನುವುದು ಮಹತ್ವದ ಸಂಗತಿ.

Latest Indian news

Popular Stories