ತಮಿಳುನಾಡು ಸರ್ಕಾರದಿಂದ ಪಡಿತರ ಕಾರ್ಡ್‍ದಾರರಿಗೆ ಪೊಂಗಲ್ ಪ್ಯಾಕೇಜ್ ಜೊತೆಗೆ 2,500 ರೂ ನಗದು ಪ್ರಕಟ

ಚೆನ್ನೈ, ಡಿ 19 (ಯುಎನ್ಐ) ತಮಿಳುನಾಡಿನಲ್ಲಿ 4-5 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗುವ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ ಪಡಿತರ ಕಾರ್ಡ್‍ದಾರರಿಗೆ ಉಚಿತ ವಿಶೇಷ ಪೊಂಗಲ್‍ ಪ್ಯಾಕೇಜ್‍ ಜೊತೆಗೆ 2,500 ರೂ ಪ್ರೋತ್ಸಾಹಧನವನ್ನು ಪ್ರಕಟಿಸಿದ್ದಾರೆ.
ಸುಗ್ಗಿಯ ಹಬ್ಬ ಪೊಂಗಲ್‍ ಆಚರಿಸಲು ಜ 4ರಿಂದ ರಾಜ್ಯಾದ್ಯಂತ ಕಾರ್ಡ್‍ದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ಯಾಕೇಜ್‍ ವಿತರಿಸಲಾಗುವುದು. ಈ ಯೋಜನೆಯಿಂದ 2.6 ಕೋಟಿ ಕಾರ್ಡ್‍ದಾರರು ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories