ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯಾ ಪ್ರಕರಣ: ಸುನೀಲ್ ವಿರುದ್ಧ ದೂರು ದಾಖಲು

ಭಜರಂಗದಳ ಕಾರ್ಯಕರ್ತ ಸುನಿಲ್ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳವಾರ (ಜನವರಿ 10) ಪೊಲೀಸರು ಮೂವರನ್ನು ಬಂಧಿಸಿದ್ದರು. ಸಾಗರದ ನಿವಾಸಿ ಸಮೀರ್ ಎಂಬಾತ ಸುನಿಲ್ ಮೇಲೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಕುರಿತು ವರದಿಯಾಗಿತ್ತು.

ಇದೀಗ ಸುನಿಲ್ ವಿರುದ್ಧ ಬಂಧಿತ ಸಮೀರ್ ಸೋದರಿ ಸಬಾ ಕೌಸರ್ ಭಜರಂಗದಳ ಕಾರ್ಯಕರ್ತ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಮೀರ್ ಹತ್ಯೆ ಯತ್ನದ ಎ1 ಆರೋಪಿಯಾಗಿದ್ದಾನೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಎಸ್​​ಪಿ ಮಿಥುನ್ ಕುಮಾರ್ (SP Mitun Kumar), ಇದೊಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದರು.

ನಾನು ಕಾಲೇಜು ಒಂದರಲ್ಲಿ ಅಂತಿಮ ವರ್ಷದ ಬಿ.ಎಸ್​​ಸಿ ವ್ಯಾಸಂಗ ಮಾಡುತ್ತಿದ್ದೇನೆ. ಪ್ರತಿದಿನ ಕಾಲೇಜಿಗೆ ಹೋಗುವ ಮತ್ತು ಬರುವ ವೇಳೆ‌ ಭಜರಂಗದಳ ಕಾರ್ಯಕರ್ತನಾಗಿರುವ ಸುನಿಲ್ ಚುಡಾಯಿಸುತ್ತಿದ್ದನು. ಫೋನ್ ನಂಬರ್ ಕೊಡುವಂತೆ ಚುಡಾಯಿಸುತ್ತಿದ್ದ ಎಂದು ಸಬಾ ಕೌಸರ್ ದೂರು ನೀಡಿದ್ದಾರೆ.

ತನ್ನ ತಂಗಿಗೆ ಕಿರುಕುಳ ನೀಡಿದ ಕಾರಣ ಆಕೆಯ ಸಹೋದರ ಸಮೀರ್ ಸುನೀಲ್ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ.

Latest Indian news

Popular Stories