ಬೆಂಗಳೂರು: ಬುಕ್ ಮಾಡಿದ ಕ್ಯಾಬ್ ಬಿಟ್ಟು ಬೇರೆ ಕಾರಿಗೆ ಹತ್ತಿದ ಮಹಿಳೆಗೆ ಚಾಲಕನಿಂದ ಹಲ್ಲೆ – ಬಂಧನ

ಬೆಂಗಳೂರು: ಬುಕ್‌ ಮಾಡಿದ ಕ್ಯಾಬ್‌ ಬದಲು ಬೇರೆ ಕ್ಯಾಬ್‌ ಹತ್ತಿದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಬಸವರಾಜು(25) ಬಂಧಿತ ಆರೋಪಿಯಾಗಿದ್ದಾನೆ. ಬುಧವಾರ ಬೆಳಗ್ಗೆ ಬೋಗನ­ಹಳ್ಳಿಯ ಅಪಾರ್ಟ್‌ಮೆಂಟ್‌ ನಿವಾಸಿ ವನಿತಾ ಅಗರ್‌ವಾಲ್‌ ಎಂಬವರಿಗೆ ಹೊಡೆದಿದ್ದರು.

ಗದಗ ಮೂಲದ ಬಸವರಾಜು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಕ್ಯಾಬ್‌ ಚಾಲಕನಾಗಿ ದ್ದು, ಬುಧವಾರ ಬೆಳಗ್ಗೆ ಬೆಳ್ಳಂದೂರಿನ ಬೋಗನಹಳ್ಳಿ ಬಳಿ ಕ್ಯಾಬ್‌ ನಿಲ್ಲಿಸಿಕೊಂಡಿದ್ದರು. ಈ ವೇಳೆ ವನಿತಾ ತಮ್ಮ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್‌ ಬುಕ್‌ ಮಾಡಿದ್ದಾರೆ. ಆಗ ಸ್ಥಳಕ್ಕೆ ಬಸವ ರಾಜು ಕ್ಯಾಬ್‌ ಬಂದಿದೆ. ತಾವು ಬುಕ್‌ ಮಾಡಿದ ಕ್ಯಾಬ್‌ ಇದೆ ಎಂದು ವನಿತಾ ಕ್ಯಾಬ್‌ ಹತ್ತಿದ್ದರು. ಆದರೆ, ಒಟಿಪಿ ಹೇಳಿದಾಗ ಅದು ತಪ್ಪಾಗಿತ್ತು. ಆಗ ಆರೋಪಿ “ನೀವು ಬುಕ್‌ ಮಾಡಿರುವುದು ಬೇರೆ ಕ್ಯಾಬ್‌, ಇಳಿಯಿರಿ’ ಎಂದಿದ್ದಾನೆ. ಈ ವಿಚಾರಕ್ಕೆ ಕ್ಯಾಬ್‌ ಚಾಲಕ ಮತ್ತು ಮಹಿಳೆ ಜತೆ ವಾಗ್ವಾದ ನಡೆದಿದೆ. ಆಗ ಮಹಿಳೆ ಕಾರಿನಿಂದ ಇಳಿದು ಡೋರನ್ನು ಜೋರಾಗಿ ಹಾಕಿದ್ದಾರೆ. ಅದರಿಂದ ಕೋಪಗೊಂಡ ಚಾಲಕ ಇಳಿದು ವನಿತಾಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಮಧ್ಯ ಪ್ರವೇಶಿಸಿದ ವನಿತಾ ಮಗ ಮತ್ತು ಸ್ಥಳೀಯರು ಜಗಳ ಬಿಡಿಸಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Latest Indian news

Popular Stories